ಜಮ್ಮು-ಕಾಶ್ಮೀರದ ಆವಂತಿಪೋರಾದಲ್ಲಿ ಉಗ್ರರಿಂದ ಟ್ರಕ್ ದಾಳಿ ಭೀತಿ

ನವದೆಹಲಿ: ಭಾರತ-ಪಾಕ್ ವಿಶ್ವಕಪ್ ಹೈವೋಲ್ಟೇಜ್ ಕದನದ ಮೇಲೆ ಎಲ್ಲರ ಗಮನ ನೆಟ್ಟಿರುವ ಬೆನ್ನಲ್ಲೇ ಭಾರತ-ಪಾಕಿಸ್ತಾನದ ಗಡಿಯಲ್ಲಿ ಉಗ್ರರು ಬೃಹತ್​ ಟ್ರಕ್​ ಬಳಸಿ ದಾಳಿ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಪಾಕಿಸ್ತಾನ ಬಹಿರಂಗಪಡಿಸಿದೆ. ಈ ಹಿನ್ನಲೆಯಲ್ಲಿ ಕಣಿವೆ ರಾಜ್ಯದಲ್ಲಿ ಹೈ ಅಲರ್ಟ್ ಏರ್ಪಡಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದಲ್ಲಿ ಬೃಹತ್​ ಟ್ರಕ್​ನಲ್ಲಿ ಸುಧಾರಿತ ಸ್ಫೋಟಕಗಳನ್ನು ಇರಿಸಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಪಾಕ್​ ಬೇಹುಗಾರಿಕೆ ಅಧಿಕಾರಿಗಳು ಭಾರತ ಮತ್ತು ಅಮೆರಿಕಕ್ಕೆ ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳು ತ್ರಾಲ್​ನಲ್ಲಿ ಹತನಾದ ಉಗ್ರ ಜಾಕೀರ್​ ಮೂಸಾನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದು ಈ ದಾಳಿಯ ಉದ್ದೇಶ ಎಂದು ಹೇಳಲಾಗಿದೆ.

ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಯಿಂದ 2017ರಲ್ಲಿ ಪ್ರತ್ಯೇಕಗೊಂಡಿದ್ದ ಜಾಕೀರ್​ ಮೂಸಾ ಅಲ್​ಖೈದಾದ ಸಹ ಉಗ್ರ ಸಂಘಟನೆಯಾಗಿ ಘಜ್ವಾತ್​ ಉಲ್​ ಹಿಂದ್​ ಎಂಬ ಉಗ್ರ ಸಂಘಟನೆಯನ್ನು ಸ್ಥಾಪಿಸಿ ಕಾಶ್ಮೀರ ಕಣಿವೆಯಲ್ಲಿ ಕಾರ್ಯಾಚರಿಸುತ್ತಿದ್ದ. ಭದ್ರತಾಪಡೆಗಳು ಈತನನ್ನು ಹತ್ಯೆ ಮಾಡಿದ್ದವು.

 

High Alert Sounded in Jammu & Kashmir After Pakistan Shares Intel of ‘Probable’ Terror Attack in Pulwama

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ