ಸ್ವತ: ಕೊಡೆಹಿಡಿದು ಮಳೆಯಿಂದ ರಕ್ಷಿಸಿ ಪ್ರಧಾನಿ ಮೋದಿಗೆ ಸ್ವಾಗತ ಕೋರಿದ ಕಿರ್ಗಿಸ್ತಾನದ ಅಧ್ಯಕ್ಷ

ನವದೆಹಲಿ: ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆದ ಶಾಂಘಾಯ್‌ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಿರ್ಗಿಸ್ತಾನದ ಅಧ್ಯಕ್ಷ ಸೂರನ್ಬೆ ಜೀನ್ಬೆಕುವ್ ಸ್ವತಃ ಕೊಡೆ ಹಿಡಿದು ಮಳೆಯಿಂದ ರಕ್ಷಿಸಿ, ಸ್ವಾಗತ ನೀಡಿದ್ದಾರೆ.

ನರೇಂದ್ರ ಮೋದಿಯವರು ಬಿಶ್ಕೆಕ್ ಗೆ ಆಗಮಿಸಿದ ವೇಳೆ ಕಿರ್ಗಿಸ್ತಾನ್ ಅಧ್ಯಕ್ಷ ಜೀನ್ಬೆಕುವ್ ಖುದ್ದು ತಾವೇ ಬಂದು ಸ್ವಾಗತಿಸಿದ್ದರು. ಈ ಸಂದರ್ಭದಲ್ಲಿ ಮಳೆ ಆರಂಭವಾಗಿದ್ದು, ಆಗ ಭದ್ರತಾ ಸಿಬ್ಬಂದಿಯ ಬದಲಾಗಿ ಸ್ವತಃ ಅಧ್ಯಕ್ಷರೇ ಛತ್ರಿ ಹಿಡಿದು ಮೋದಿಯವರನ್ನು ಸ್ವಾಗತಿಸಿದ್ದಾರೆ.

ನರೇಂದ್ರ ಮೋದಿ ಅವರು ಕಳೆದ ವಾರ ಶ್ರೀಲಂಕಾಗೆ ಭೇಟಿ ನೀಡಿದ ಸಂದರ್ಭದಲ್ಲೂ ಅಲ್ಲಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸ್ವತಃ ತಾವೇ ಕೊಡೆ ಹಿಡಿದು ತಮ್ಮನ್ನು ಹಾಗೂ ಮೋದಿಯವರನ್ನು ಮಳೆಯಿಂದ ರಕ್ಷಿಸಿಕೊಂಡಿದ್ದರು. ಈಗ ಮತ್ತೆ ಕಿರ್ಗಿಸ್ತಾನದ ಅಧ್ಯಕ್ಷ ಸೂರನ್ಬೆ ಜೀನ್ಬೆಕುವ್ ಅವರು ಕೂಡ ಸ್ವತಃ ತಾವೇ ಛತ್ರಿ ಹಿಡಿದು ಸ್ವಾಗತ ಮಾಡಿದ್ದಾರೆ.

ಕಿರ್ಗಿಸ್ತಾನದ ಶಾಂಘೈ ಸಹಕಾರ ಒಕ್ಕೂಟ (ಎಸ್.ಸಿ.ಒ.) ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಎಸ್.ಸಿ.ಒ ಸದಸ್ಯ ರಾಷ್ಟ್ರಗಳು ಪರಸ್ಪರ ಸಹಕಾರ ನೀಡಬೇಕು. ಅಲ್ಲದೆ ಈ ಎಲ್ಲಾ ರಾಷ್ಟ್ರಗಳು ಸೇರಿ ಪ್ರಾದೇಶಿಕ ಉಗ್ರ ನಿಗ್ರಹ ಒಕ್ಕೂಟವನ್ನು ರಚನೆ ಮಾಡಿಕೊಳ್ಳಬೇಕು. ಉಗ್ರವಾದದ ವಿರುದ್ಧ ಹೋರಾಟಕ್ಕೆ ಎಲ್ಲಾ ರಾಷ್ಟ್ರಗಳು ಸಂಕುಚಿತ ಮನೋಭಾವ ಬಿಟ್ಟು ಒಗ್ಗೂಡಬೇಕು ಎಂದು ಹೇಳಿದ್ದರು.

Umbrella diplomacy: PM Narendra Modi deeply touched when Presidents held umbrella for him

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ