ನಾಪತ್ತೆಯಾಗಿದ್ದ ಎಎನ್​.-32 ಯುದ್ಧವಿಮಾನದ ಅವಶೇಷಗಳು ಪತ್ತೆ

ನವದೆಹಲಿ: ಕಳೆದ 8 ದಿನಗಳಿಂದ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ ಎಎನ್​.-32 ಯುದ್ಧವಿಮಾನದ ಅವಶೇಷಗಳು ಎಂಟು ದಿನಗಳ ಬಳಿಕ ಅರುನಾಚಲ ಪ್ರದೇಶದಲ್ಲಿ ಪತ್ತೆಯಾಗಿರುವುದಾಗಿ ವಾಯುಪಡೆ ಮೂಲಗಳು ತಿಳಿಸಿವೆ.

ಅರುಣಾಚಲ ಪ್ರದೇಶದ ಲಿಪೋದ ಉತ್ತರಕ್ಕೆ 16 ಕಿಮೀ ದೂರದಲ್ಲಿ ಎಎನ್​.-32 ವಿಮಾನದ ಅವಶೇಷಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಎಎನ್​-32 ಯುದ್ಧವಿಮಾನದ ಅವಶೇಷಗಳ ಪತ್ತೆಗಾಗಿ ಎಂಐ-17 ಯುದ್ಧಹೆಲಿಕಾಪ್ಟರ್​ ಮಂಗಳವಾರ ಕಾರ್ಯನಿರತವಾಗಿತ್ತು. ಈ ಸಂದರ್ಭದಲ್ಲಿ ವಿಮಾನದ ಅವಶೇಷ ಪತ್ತೆಯಾಗಿದ್ದಾಗಿ ಭಾರತೀಯ ವಾಯುಪಡೆ ತಿಳಿಸಿವೆ.

13 ಪ್ರಯಾಣಿಕರನ್ನು ಹೊತ್ತು ಅಸ್ಸಾಂನ ಜೋಹರಾಟ್​ನಿಂದ ಅರುಣಾಚಲ ಪ್ರದೇಶದ ಚೀನಾದ ಗಡಿಭಾಗದತ್ತ ಜೂ.3ರ ಮಧ್ಯಾಹ್ನ 12.25ಕ್ಕೆ ಹೊರಟ್ಟಿದ್ದ ಎಎನ್​-32 ಯುದ್ಧವಿಮಾನ ಅರುಣಾಚಲ ಪ್ರದೇಶ ವ್ಯಾಪ್ತಿಯಲ್ಲಿ ಹಾರಾಡುವಾಗ ಹಠಾತ್ತನೆ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡಿತ್ತು. ಅಂದಿನಿಂದಲೂ ಈ ವಿಮಾನಕ್ಕಾಗಿ ಭಾರತೀಯ ವಾಯುಪಡೆ ಶೋಧ ನಡೆಸಿತ್ತು.

Wreckage Of Missing Air Force An-32 Plane Found In Arunachal pradesh

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ