ಪೊಲೀಸ್ ಠಾಣಾ ಆವರಣದಲ್ಲೇ ತೃತೀಯ ಲಿಂಗಿಗಳ ಮೇಲೆ ಲಾಠಿ ಚಾರ್ಜ್

ಲಖನೌ: ತೃತೀಯ ಲಿಂಗಿ ಸಮುದಾಯದ ಕೆಲ ಸದಸ್ಯರ ಮೇಲೆ ಪೊಲೀಸ್​ ಠಾಣಾ ಆವರಣದಲ್ಲಿಯೇ ಪೊಲೀಸರು ಲಾಠಿ ಚಾರ್ಜ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್​ ಜಿಲ್ಲೆಯ ಲಾಲ್​ ಕುರ್ತಿ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

ಎರಡು ಗುಂಪಿನ ತೃತೀಯ ಲಿಂಗಿ ಸಮುದಾಯದವರು ಮೀರತ್​ನ ಫವ್ವಾರ ಚೌಕದ ಸಮೀಪವಿರುವ ಮನೆಯೊಂದರ ಕುಟುಂಬಕ್ಕೆ ಶುಭಕೋರಲು ಹೋಗಿದ್ದಾಗ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸ್ಥಳೀಯರೊಬ್ಬರು ಪೊಲೀಸರಿಗೆ ಕರೆ ಮಾಡಿ ಗಲಾಟೆ ಕುರಿತು ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಠಾಣೆಯನ್ನು ತಲುಪುತ್ತಿದ್ದಂತೆ ಎರಡು ಗುಂಪುಗಳು ಇನ್ನಷ್ಟು ಗದ್ದಲ ಆರಂಭಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ತೃತೀಯಲಿಂಗಿಗಳ ಮೇಲೆ ಲಾಠಿಚಾರ್ಜ್​ ಮಾಡಿದ್ದಾರೆ. ಎರಡು ಗುಂಪಿನವರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್​ ವರಿಷ್ಠಾಧಿಕಾರಿ, ತೃತೀಯ ಲಿಂಗಿಗಳು ಅನುಚಿತವಾಗಿ ವರ್ತನೆ ಮಾಡಿದರು. ಅವರನ್ನು ನಿಯಂತ್ರಣ ಮಾಡಲು ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದಾರೆ. ಒಂದು ವೇಳೆ ಅಗತ್ಯಕ್ಕಿಂತ ಹೆಚ್ಚಾಗಿ ಅವರ ವಿರುದ್ಧ ಲಾಠಿಚಾರ್ಜ್​ ಮಾಡಿದ್ದರೆ, ತನಿಖೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

Transgenders Lathi-charged in Meerut After Two Groups Create Fracas in Police Station

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ