17ನೇ ಲೋಕಸಭೆ ಸ್ಪೀಕರ್​ ಆಗಿ ಬಿಜೆಪಿ ಸಂಸದ ವೀರೇಂದ್ರ ಕುಮಾರ್​ ಆಯ್ಕೆ

ನವದೆಹಲಿನರೇಂದ್ರ ಮೋದಿ ಪ್ರಧಾನಿಯಾಗಿ ಎರಡನೇ ಬಾರಿ ಆಯ್ಕೆಯಾದ ಬೆನ್ನಲ್ಲೇ ಸಚಿವ ಸಂಪುಟ ರಚನೆ ಮಾಡಲಾಗಿತ್ತು. ಆದರೆ 17ನೇ ಲೋಕಸಭೆಯ ಸ್ಪೀಕರ್​ ಆಯ್ಕೆ ಆಗಿರಲಿಲ್ಲ. ಇದೀಗ ಬಿಜೆಪಿಯ ಸಂಸದ ವೀರೇಂದ್ರ ಕುಮಾರ್​ ಖತಿಕ್​ ಅವರನ್ನು ಸ್ಪೀಕರ್​ ಆಗಿ ಆಯ್ಕೆಮಾಡಲಾಗಿದೆ.

ಶೀಘ್ರದಲ್ಲೇ ವೀರೇಂದ್ರ ಕುಮಾರ್​ ಲೋಕಸಭಾ ಸ್ಪೀಕರ್​ ಸ್ಥಾನವನ್ನು ಅಲಂಕರಿಸಲಿದ್ದಾರೆ. ವೀರೇಂದ್ರ ಕುಮಾರ್​ ಮಧ್ಯಪ್ರದೇಶದ ಸಾಗರ್​ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಹಿರಿಯ ಬಿಜೆಪಿ ಮುಖಂಡರೂ ಆಗಿದ್ಧಾರೆ. ಈ ಹಿಂದೆ ಮನೇಕಾ ಗಾಂಧಿಯವರನ್ನು ಸಂಪುಟದಿಂದ ಹೊರಗಿಟ್ಟಾಗ, ಈ ಬಾರಿಯ ಸ್ಪೀಕರ್​ ಆಗಿ ಅವರನ್ನು ನೇಮಕ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಈ ಊಹಾಪೋಹಕ್ಕೆ ಉತ್ತರ ಸಿಕ್ಕಿದ್ದು, ಸ್ಪೀಕರ್​ ಸ್ಥಾನಕ್ಕೆ ವೀರೇಂದ್ರ ಕುಮಾರ್​ ಆಯ್ಕೆಯಾಗಿದ್ದಾರೆ.

ವೀರೇಂದ್ರ ಕುಮಾರ್​ ಏಳು ಬಾರಿ ಸಂಸದರಾಗಿ ಆಯ್ಕೆಯಾದ ಅನುಭವ ಹೊಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ