ಹಾರ್ಲೆ ಡೇವಿಡ್ ಸನ್ ಮೇಲೆ ಭಾರತದ ತೆರಿಗೆ ಒಪ್ಪಲು ಸಾಧ್ಯವಿಲ್ಲ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಹಾರ್ಲೆ ಡೇವಿಡ್ ಸನ್ ಮೋಟಾರು ಸೈಕಲ್ ಮೇಲೆ ಭಾರತ ವಿಧಿಸಿರುವ ಅಧಿಕ ಆಮದು ತೆರಿಗೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಹಾರ್ಲೆ ಡೇವಿಡ್ ಸನ್ ಮೋಟಾರು ಸೈಕಲ್ ಮೇಲೆ ಭಾರತ ವಿಧಿಸಿರುವ ಅಧಿಕ ಆಮದು ತೆರಿಗೆ ಕುರಿತು ಕಿಡಿಕಾರಿರುವ ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರ್ರ್. ಅಮೆರಿಕಾವನ್ನು ಪ್ರತಿಯೊಬ್ಬರೂ ಬ್ಯಾಂಕ್ ಎಂದು ಪರಿಗಣಿಸಿ ದರೋಡೆ ಮಾಡಲು ನೋಡುತ್ತಿದ್ದಾರೆ ಎಂದಿದ್ದಾರೆ.

ಅಲ್ಲದೇ ತಮ್ಮ ಆಡಳಿತದಡಿಯಲ್ಲಿ ಅಮೆರಿಕಾವನ್ನು ಮೂರ್ಖ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮದು ಮೂರ್ಖರನ್ನು ಹೊಂದಿರುವ ದೇಶವಲ್ಲ.

ನನ್ನ ಉತ್ತಮ ಸ್ನೇಹಿತ ಭಾರತದ ಪ್ರಧಾನಿ ನರೇಂದ್ರ ಮೋದಿ. ಆದರೆ ಅವರು ಈಗ ಏನು ಮಾಡಿದ್ದಾರೆ ಎಂದು ನೋಡಿ, ಮೋಟಾರು ಸೈಕಲ್ ಮೇಲೆ ಶೇಕಡಾ 100ರಷ್ಟು ತೆರಿಗೆ ವಿಧಿಸಿದ್ದಾರೆ. ಅವರಿಗೆ ನಾವು ಯಾವುದೇ ದರ ಹೇರಿಕೆ ಮಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಹರ್ಲೆ ಡೇವಿಡ್ಸನ್ ಮೋಟಾರು ಸೈಕಲ್ ಮೇಲೆ ಭಾರತ ವಿಧಿಸಿರುವ ಆಮದು ತೆರಿಗೆಯನ್ನು ಉಲ್ಲೇಖಿಸಿ ಮಾತನಾಡಿದ ಟ್ರಂಪ್, ಈ ಬಗ್ಗೆ ಭಾರತ ಸರ್ಕಾರಕ್ಕೆ ಇಂತಹ ತೆರಿಗೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದೇನೆ. ಅದನ್ನು ಶೂನ್ಯ ತೆರಿಗೆಗೆ ಇಳಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ.

ಒಂದು ದೂರವಾಣಿ ಕರೆಯಿಂದ ಮೋಟಾರು ಸೈಕಲ್ ಮೇಲಿನ ಆಮದು ದರವನ್ನು ಶೇಕಡಾ 50ಕ್ಕೆ ಇಳಿಸಿದ್ದಾರೆ. ಆದರೂ ಕೂಡ ಅದು ಸಾಧ್ಯವಿಲ್ಲ ಎಂದು ನಾನು ಹೇಳಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನಹರಿಸಿ ದರ ಇಳಿಸುವ ಕುರಿತು ಪರಿಶೀಲಿಸುತ್ತೇವೆ ಎಂದು ಭಾರತ ಹೇಳಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

50% import tariff on Harley Davidson unacceptable, India should remove it: Trump

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ