ನರ್ಸ್​ ರಾಜಮ್ಮ ರನ್ನು ಭೇಟಿಯಾದ ರಾಹುಲ್ ಗಾಂಧಿ

ನವದೆಹಲಿ: ಕೇರಳದ ವಯನಾಡ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ನರ್ಸ್​ ರಾಜಮ್ಮ ಅವರನ್ನು ಭೇಟಿಯಾದರು.

ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ರಾಹುಲ್​ ಗಾಂಧಿ, ಮೂರು ದಿನಗಳ ವಯಾನಾಡು ಪ್ರವಾಸದಲ್ಲಿದ್ದು, ಇಂದು ಕೊನೇ ದಿನವಾಗಿದೆ. ಈ ಹಿನ್ನಲೆಯಲ್ಲಿ ಅವರು ತಾವು ಜನ್ಮನೀಡಿದ ಸಂದರ್ಭದಲ್ಲಿ ಇದ್ದ ನರ್ಸ್​ ಭೇಟಿಯಾಗಿ ಅವರಿಗೊಂದು ಪ್ರೀತಿಯ ಅಪ್ಪುಗೆ ನೀಡಿದ್ದಾರೆ.

49 ವರ್ಷಗಳ ಹಿಂದೆ ರಾಹುಲ್​ಗಾಂಧಿ ಅವರು ದೆಹಲಿಯಲ್ಲಿ ಜನಿಸಿದಾಗ ನರ್ಸ್​ ರಾಜಮ್ಮ ರಾಜಪ್ಪನ್​ ಅವರು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ನಿವೃತ್ತಗೊಂಡಿರುವ ಅವರು ವಯಾನಾಡ್​ನಲ್ಲಿ ವಾಸವಾಗಿದ್ದಾರೆ. ಜೂ 19ರಂದು ರಾಹುಲ್​ ಗಾಂಧಿ ಹುಟ್ಟಿದ್ದು ಇದೇ 19ಕ್ಕೆ ಅವರಿಗೆ ಸರಿಯಾಗಿ 49 ವರ್ಷ ತುಂಬುತ್ತದೆ. ಈಗ ರಾಜಮ್ಮನವರನ್ನು ಭೇಟಿಯಾದ ಅವರು ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ಶುಕ್ರವಾರ ವಯಾನಾಡ್​ಗೆ ತೆರಳಿರುವ ರಾಹುಲ್​ ಗಾಂಧಿ ಅಲ್ಲಿ ಹಲವು ರೋಡ್​ ಶೋಗಳನ್ನು ಹಮ್ಮಿಕೊಂಡಿದ್ದರು. ಶನಿವಾರ ಕಲ್ಪೆಟ್ಟಾದಲ್ಲಿ ರೋಡ್​ ಶೋ ನಡೆಸಿದ್ದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಮೋದಿಯವರ ಚುನಾವಣಾ ಪ್ರಚಾರ ಪೂರ್ತಿಯಾಗಿ ಸುಳ್ಳು, ವಿಷಪೂರಿತ ಹಾಗೂ ದ್ವೇಷಭರಿತವಾಗಿತ್ತು ಎಂದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ