ಡೆಪ್ಯುಟಿ ಸ್ಪೀಕರ್ ಹುದ್ದೆ ನಮ್ಮ ಹಕ್ಕು ಎಂದ ಶಿವಸೇನೆ

ನವದೆಹಲಿ: ಲೋಕಸಭೆಯ ಉಪಸಭಾಪತಿ ಸ್ಥಾನ ತಮಗೆ ನೀಡಬೇಕು ಎಂದು ಶಿವಸೇನೆ ಪಟ್ಟುಹಿಡಿದಿದೆ. ಈ ಕುರಿತು ಈಗಾಗಲೇ ಗೃಹ ಸಚಿವ ಹಾಗೂ ಬಿಜೆಪಿ ವರಿಷ್ಠ ಅಮಿತ್ ಶಾ ಎದುರು ಪ್ರಸ್ತಾವನೆ ಇಟ್ಟಿದೆ.

ಪ್ರಧಾನಿ ಮೋದಿ ಸಂಪುಟದಲ್ಲಿ ಮೈತ್ರಿ ಪಕ್ಷ ಶಿವಸೇನೆಗೆ ಕೇವಲ ಒಂದು ಸ್ಥಾನ ನೀಡಲಾಗಿದೆ. ಈಗ ಶಿವಸೇನೆ ಬಿಜೆಪಿಯೆದುರು ಒಟ್ಟು ಮೂರು ಬೇಡಿಕೆಗಳನ್ನು ಇಟ್ಟಿದೆ.

ಲೋಕಸಭೆಯ ಡೆಪ್ಯೂಟಿ ಸ್ಪೀಕರ್​ ಹುದ್ದೆಯನ್ನು ನೀಡಬೇಕು ಎಂಬುದು ಸೇರಿ ಒಟ್ಟು ಮೂರು ಬೇಡಿಕೆಗಳನ್ನು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್​ ಷಾ ಅವರ ಬಳಿ ಇಟ್ಟಿದ್ದಾರೆ. ಅಲ್ಲದೆ, ತಮ್ಮ ಪಕ್ಷದಿಂದ ಸಂಪುಟ ಸೇರಿ ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವರಾಗಿ ಅಧಿಕಾರವಹಿಸಿಕೊಂಡಿರುವ ಅರವಿಂದ್​ ಸಾವಂತ್​ ಅವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿ, ಇನ್ನೂ ಪ್ರಮುಖ ಖಾತೆ ನೀಡಬೇಕು ಎಂದು ಕೂಡ ಬೇಡಿಕೆ ಇಟ್ಟಿದೆ.

ಇದೇ ವೇಳೆ ಶಿವಸೇನೆ ಮುಖಂಡ ಸಂಜಯ್​ ರಾವತ್​, ಲೋಕಸಭಾ ಡೆಪ್ಯುಟಿ ಸ್ಪೀಕರ್​ ಹುದ್ದೆ ನೀಡಿ ಎನ್ನುತ್ತಿರುವುದು ನಮ್ಮ ಬೇಡಿಕೆಯಲ್ಲ. ಅದು ನಮ್ಮ ಹಕ್ಕು ಎಂದು ಹೇಳಿದ್ದಾರೆ.

ನಮ್ಮ ಪಕ್ಷ ಒಟ್ಟು 18 ಸಂಸದರನ್ನು ಹೊಂದಿದೆ. ಹೀಗಾಗಿ ಡೆಪ್ಯೂಟಿ ಸ್ಪೀಕರ್​ ಹುದ್ದೆ ನೀಡಬೇಕಾಗಿರುವುದು ಸಹಜ ಪ್ರಕ್ರಿಯೆ. ಈ ಹುದ್ದೆಯನ್ನು ಬೇರೆ ಇನ್ಯಾವುದೋ ಪಕ್ಷಕ್ಕೆ ಕೊಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

Lok sabha,Deputy Speaker post, our natural claim,Shiv Sena

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ