ಐಸಿಸಿ ವಿಶ್ವಕಪ್-2019: ದಕ್ಷಿಣಾ ಆಪ್ರಿಕಾ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿರುವ ಭಾರತ

ಸೌತಾಂಪ್ಟನ್,ಜೂ.05-ಇಂದು ಭಾರತೀಯ ಅಭಿಮಾನಿಗಳಿಗೆ ಮಹಾಹಬ್ಬದಂತೆ ಕಾಣುತ್ತಿದೆ, ಕಾರಣ ಬ್ಲೂ ಬಾಯ್ಸ್ ಮೊದಲ ಪಂದ್ಯವನ್ನು ದಕ್ಷಿಣಾ ಆಪ್ರಿಕಾ ವಿರುದ್ಧ ಸೆಣೆಸುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಿದ್ದಾರೆ.

ಕಳೆದೊಂದು ವರ್ಷದಿಂದ ಸ್ಥಿರ ನಿರ್ವಹಣೆ ತೋರುತ್ತಿರುವ ಭಾರತವನ್ನು ದಕ್ಷಿಣಾ ಆಪ್ರಿಕಾ ಸುಲಭವಾಗಿ ಪರಿಗಣಿಸುವಂತಿಲ್ಲ. ಯಾವುದೇ ತಂಡವಿದ್ದರಊ ಆಸಾಧಾರಣ ಸವಾಲೊಡ್ಡಬಲ್ಲ ಆಟಗಾರರು ತಂಡದಲ್ಲಿದ್ದಾರೆ. ಇದುವರೆಗೂ ಮೂರು ಪಂದ್ಯಗಳನಾಡಿರುವ ದಕ್ಷಿಣಾ ಆಪ್ರಿಕಾ ಗೆಲುವನ್ನು ಕಾಣದಿರುವುದು ನಾಯಕ ಡುಪ್ಲೆಸಿಸ್‍ರನ್ನು ಚಿಂತೆಗೀಡು ಮಾಡಿದೆ.

ಸ್ಟೈನ್ ಔಟ್:
ವಿಶ್ವ ಶ್ರೇಷ್ಠ ವೇಗದ ಬೌಲರ್ ಡೇಲ್ ಸ್ಟೈನ್ ಬುಜದ ಗಾಯದಿಂದಾಗಿ ವಿಶ್ವಕಪ್‍ನಿಂದ ಹೊರಬಿದ್ದಿರುವುದು ಬೌಲಿಂಗ್ ಜವಾಬ್ದಾರಿ ರಬಾಡರ ಮೇಲಿದೆ.

ಕೊಹ್ಲಿ-ರಬಾಡ ಮಾತಿನ ಯುದ್ದ:
ದಕ್ಷಿಣಾ ಆಪ್ರಿಕಾ ತಂಡದ ಬೌಲಿಂಗ್ ಜವಾಬ್ದಾರಿ ಹೊತ್ತಿರುವ ರಬಾಡ ಪಂದ್ಯಕ್ಕೂ ಮುನ್ನವೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. “ವಿರಾಟ್ ಕೊಹ್ಲಿ ಮೈದಾನದಲ್ಲಿ ಪ್ರಬುದ್ಧತೆಯಿಂದ ವರ್ತಿಸುವುದಿಲ್ಲ” ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದಕ್ಕೆ ಸುದ್ಧಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ರಬಾಡ ನನ್ನ ಬಗ್ಗೆ ಏನಾದರೂ ಹೇಳಲಿ, ನಾನು ಅವರೊಂದಿಗೆ ಹಲವು ಪಂದ್ಯಗಳನ್ನು ಆಡಿದ್ದೇನೆ.

ಅವರ ಟೀಕೆಗಳಿಗೆ ಉತ್ತರಿಸಲು ನನಗೆ ಮಾಧ್ಯಮದ ಆವಶ್ಯಕತೆಯಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ