ಚುನಾವಣೆಯಲ್ಲಿ ತನ್ನ ಮಗ ವೈಭವ್ ಸೋಲಲು ಸಚಿನ್ ಪೈಲಟ್ ಕಾರಣ ಎಂದ ರಾಜಸ್ಥಾನ ಸಿಎಂ

ಜೈಪುರ: ರಾಜಸ್ಥಾನ ಕಾಂಗ್ರೆಸ್​ನಲ್ಲೂ ಭಿನ್ನಮತ ಭುಗಿಲೆದ್ದಿದ್ದು, ನಾಯಕರು ಪರಸ್ಪರರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಲೋಕಸಭ ಚುನಾವಣೆಯಲ್ಲಿ ತನ್ನ ಮಗ ವೈಭವ್ ಸೋಲಲು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕಾರಣ ಎಂದು ಸಿಎಂ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಜೋಧಪುರ ಕ್ಷೇತ್ರದಿಂದ ಸ್ಪರ್ಧಿಸುವಂತೆ ತಮ್ಮ ಪುತ್ರ ವೈಭವ್​ ಗೆಹ್ಲೋಟ್​ಗೆ​ ಸೂಚಿಸಿದ್ದು ಸಚಿನ್​ ಪೈಲಟ್​. ಅಲ್ಲಿ ಅವರು ಬಿಜೆಪಿಯ ಗಜೇಂದ್ರ ಸಿಂಗ್​ ಶೇಖಾವತ್​ ವಿರುದ್ಧ 2.7 ಲಕ್ಷ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಈ ಸೋಲಿನ ಹೊಣೆಯನ್ನು ಉಪಮುಖ್ಯಮಂತ್ರಿ ಸಚಿನ್​ ಪೈಲಟ್​ ಹೊರಬೇಕು ಎಂದು ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ತಿಳಿಸಿದ್ದಾರೆ.

ನಾವು ದೊಡ್ಡ ಅಂತರದಿಂದ ಗೆಲ್ಲುತ್ತೇವೆ ಎಂದು ಪೈಲಟ್​ ತಿಳಿಸಿದ್ದರು. ಜೋಧಪುರ ಕ್ಷೇತ್ರದಲ್ಲಿ ಕಾಂಗ್ರೆಸ್​ನ 6 ಶಾಸಕರಿದ್ದು, ವೈಭವ್​ ಪರ ವ್ಯಾಪಕ ಪ್ರಚಾರ ಮಾಡಲಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು. ವೈಭವ್​ ಅಲ್ಲಿ ಸೋಲಲು ಏನು ಕಾರಣ ಎಂಬ ಕುರಿತು ವಿವರವಾದ ಆತ್ಮಾವಲೋಕನ ಮಾಡಿಕೊಳ್ಳೋಣ. ವೈಭವ್​ ಜತೆಯಲ್ಲೇ ನಾವು ಎಲ್ಲಾ 25 ಸೀಟುಗಳಲ್ಲೂ ಸೋಲನುಭವಿಸಿದ್ದೇವೆ ಎಂದು ಗೆಹ್ಲೋಟ್​ ತಿಳಿಸಿದ್ದಾರೆ.

Sachin Pilot Should Take Responsibility for My Son’s Defeat in Jodhpur, says Ashok Gehlot

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ