ರಾಷ್ಟ್ರೀಯ ಪೊಲೀಸ್​ ಸ್ಮಾರಕಕ್ಕೆ ಗೃಹಸಚಿವ ಅಮಿತ್​ ಷಾ ಗೌರವ ನಮನ

ನವದೆಹಲಿ: ನೂತನ ಕೇಂದ್ರ ಗೃಹಸಚಿವ ಅಮಿತ್​ ಷಾ ದೆಹಲಿಯಲ್ಲಿರುವ ರಾಷ್ಟ್ರೀಯ ಪೊಲೀಸ್​ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.

34,488 ಪೊಲೀಸ್​​ ಸಿಬ್ಬಂದಿಯ ಗೌರವಾರ್ಥ ನಿರ್ಮಿಸಲಾಗಿರುವ ಈ ಸ್ಮಾರಕದಲ್ಲಿ ಹುತಾತ್ಮರಿಗೆ ಗೃಹ ಸಚಿವರು ಗೌರವ ಸಲ್ಲಿಸಿದರು.

ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟ ಸೇರಿರುವ ಅಮಿತ್​ ಷಾ ಶನಿವಾರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬಿಳಿಕ ಅಮಿತ್​ ಷಾ ಅವರೊಂದಿಗೆ ಉನ್ನತ ಪೊಲೀಸ್​ ಅಧಿಕಾರಿಗಳೂ ಇದ್ದರು. ಸೆಲ್ಯೂಟ್​ ಮಾಡುವ ಮೂಲಕ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.

ಕಳೆದ ಬಾರಿಯ ಸಂಪುಟದಲ್ಲಿ ರಾಜನಾಥ್​ ಸಿಂಗ್ ಗೃಹ ಸಚಿವರಾಗಿದ್ದರು. ಈ ಬಾರಿ ಅವರು ರಕ್ಷಣಾ ಖಾತೆ ವಹಿಸಿಕೊಂಡಿದ್ದು ಅಮಿತ್​ ಷಾ ಹೆಗಲಿಗೆ ಗೃಹ ಖಾತೆ ಜವಾಬ್ದಾರಿ ಹೊರಿಸಲಾಗಿದೆ.

Amit Shah Pays Tribute At National Police Memorial In Delhi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ