ಅಮೆರಿಕಾಕ್ಕೆ ನುಂಗಲಾರದ ತುತ್ತಾದ ಭಾರತ-ರಷ್ಯಾ ರಕ್ಷಣಾ ಮೈತ್ರಿ

ವಾಷಿಂಗ್ಟನ್, ಮೇ 31-ಭಾರತ ತನ್ನ ಪರಮಾಪ್ತ ಮಿತ್ರರಾಷ್ಟ್ರ ರಷ್ಯಾ ಜೊತೆ ರಕ್ಷಣಾ ಮೈತ್ರಿ ಹೊಂದುತ್ತಿರುವುದು ಅಮೆರಿಕಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ರಷ್ಯಾದಿಂದ ಎಸ್-5000 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಮುಂದಾಗಿರುವುದು ಅಮೆರಿಕ ಕಣ್ಣನ್ನು ಕೆಂಪಾಗಿಸಿದೆ. ರಷ್ಯಾ ಜೊತೆ ರಕ್ಷಣಾ ಮೈತ್ರಿಯಿಂದ ಭಾರತ ಮತ್ತು ಅಮೆರಿಕ ನಡುವಣ ಸಂಬಂಧಕ್ಕೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಎಚ್ಚರಿಕೆ ನೀಡಿದೆ.

ಕಳೆದ ವರ್ಷ ಅಕ್ಟೋಬರ್‍ನಲ್ಲಿ ಭಾರತ-ರಷ್ಯಾ ನಡುವೆ ಐದು ಶತಕೋಟಿ ಡಾಲರ್ ವೆಚ್ಚದಲ್ಲಿ ಎಸ್-5000 ಕ್ಷಿಪಣಿಗಳನ್ನು ಖರೀದಿಸಲು ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಒಪ್ಪಂದ ಏರ್ಪಟ್ಟಿತ್ತು.

ಭೂಮಿಯಿಂದ ಗಗನಕ್ಕೆ ಚಿಮ್ಮಿ ವೈರಿಗಳ ವಿಮಾನಗಳನ್ನು ಹೊಡೆದುರುಳಿಸುವ ಅಗಾಧ ಸಾಮಥ್ರ್ಯದ ಈ ಕ್ಷಿಪಣಿಗಳನ್ನು ಖರೀದಿಸಲು ಭಾರತ ನಿರ್ಧರಿಸಿರುವುದರಿಂದ ಅಮೆರಿಕ ಜೊತೆಗಿನ ರಕ್ಷಣಾ ಸಂಬಂಧಕ್ಕೆ ಧಕ್ಕೆಯಾಗಲಿದೆ. ಇದು ವಾಷಿಂಗ್ಟನ್‍ಗೆ ಅತ್ಯಂತ ವಿಷಾದದ ಸಂಗತಿಯಾಗಿದೆ ಎಂದು ರಕ್ಷಣಾ ಇಲಾಖೆ- ಪೆಂಟಗನ್ ಉನ್ನತ ಅಧಿಕಾರಿಯೊಬ್ಬರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ