ಪ್ರಧಾನಿ ಮೋದಿ ಟಿವಿಯಲ್ಲಿ ಬರುತ್ತಿದ್ದಂತೆ ಸಂತೋಷದಿಂದ ಚಪ್ಪಾಳೆ ತಟ್ಟಿದ ಅವರ ತಾಯಿ

ಅಹಮದಾಬಾದ್, ಮೇ 31- ದೇಶಕ್ಕೆ ಪ್ರಧಾನಿಯಾದರೂ ಹೆತ್ತತಾಯಿಗೆ ಮುದ್ದಿನ ಮಗ.

ರಾಷ್ಟ್ರಪತಿ ಭವನದಲ್ಲಿ ನಿನ್ನೆ ಪುತ್ರನ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದ ನರೇಂದ್ರ ಮೋದಿ ಅವರ ತಾಯಿ 95 ವರ್ಷದ ಹೀರಾಬೆನ್ ಅವರು ಚಪ್ಪಾಳೆ ತಟ್ಟಿ ಹಿರಿಹಿರಿ ಹಿಗ್ಗಿದರು.

ಪ್ರಧಾನಿ ಮೋದಿ ಟಿವಿಯಲ್ಲಿ ಬರುತ್ತಿದ್ದಂತೆ ಹೀರಾಬೆನ್ ಅವರು ಸಂತೋಷದಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿರುವ ಪೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಮೋದಿ ಯಾವುದೇ ಪ್ರಮುಖ ನಿರ್ಧಾರ ಮತ್ತು ಮುಖ್ಯ ಸಂದರ್ಭಗಳಲ್ಲಿ ತಾಯಿ ಹೀರಾಬೆನ್ ಆಶೀರ್ವಾದ ಪಡೆಯುತ್ತಾರೆ. ಪ್ರಮಾಣ ವಚನಕ್ಕೂ ಮುನ್ನ ಅವರು ಶನಿವಾರ ಅಹಮದಾಬಾದ್‍ಗೆ ತೆರಳಿ ಮಾತೆಯ ಆಶೀರ್ವಾದ ಪಡೆದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ