ವಿದ್ಯಾಪೋಷಕ ಆರ್ಥಿಕ ನೆರವಿಗೆ ಅರ್ಜಿ ಆಹ್ವಾನ

ಬಾಗಲಕೋಟ; 2019-20 ನೇ ಸಾಲಿನ ಧಾರವಾಢದ ವಿದ್ಯಾಪೋಷಕ ಸಂಸ್ಥೆಯ ಆರ್ಥಿಕ ನೆರವಿಗೆ ಅರ್ಜಿ ಆಹ್ವಾನಿಸಿದೆ.

ಕುಟುಂಬದ ಆದಾಯ ವಾರ್ಷಿಕ ರೂ.80,000 ಒಳಗಿರಬೇಕು. SSLC ನಂತರ ಶಿಕ್ಷಣ ಮುಂದುವರೆಸಲು ಆಸಕ್ತಿ ಇರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ/ನಿಯರು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು(ವಿಜ್ಞಾನ ವಿಭಾಗ ಹೊರತುಪಡಿಸಿ) ಕಲಾ, ವಾಣಿಜ್ಯ, ಡಿಪ್ಲೋಮಾ, ಐಟಿಐ, ಜೆಟಿಟಿಸಿ ಕೋರ್ಸಗಳಿಗೆ ಶೇ 80 ಅಂಕ ಪಡೆದ ವಿದ್ಯಾರ್ಥಿ/ನಿಯರು ಪ್ರವೇಶ ಪಡೆದಿರಬೇಕು. ಬಾಗಲಕೋಟ, ವಿಜಯಪೂರ, ಧಾರವಾಢ, ಗದಗ, ಡಾವಣಗೆರೆ, ಬೆಳಗಾವಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಎಲ್ಲ ಜಾತಿ ಜನಾಂಗದ ವಿದ್ಯಾರ್ಥಿ/ನಿಯರು ಜೂನ್ 30 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ವಿದ್ಯಾಪೋಷಕ ಧಾರವಾಢ ಸ್ವಯಂ ಸೇವಕರಾದ ಬಾದಾಮಿ ನಗರದ ನ್ಯಾಯವಾದಿ ಎಂ.ಎಸ್. ಹಿರೇಮಠ ಮೊ;9632913141 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ