ಅಭಿವೃದ್ಧಿಯೇ ನಮ್ಮ ಮಂತ್ರ ಎಂದ ಪ್ರಧಾನಿ ಮೋದಿ

ವಾರಣಾಸಿ: ದ್ವೇಷದ ರಾಜಕಾರಣದ ನಡುವೆಯೂ ಎಲ್ಲರ ಜೊತೆ, ಎಲ್ಲರ ವಿಕಾಸ ಬಿಜೆಪಿಯ ಮಂತ್ರವಾಗಿ ಮುಂದುವರೆಯಲಿದೆ, ದೂರದೃಷ್ಟಿ ಹಾಗೂ ಕಠಿಣ ಶ್ರಮಕ್ಕೆ ಗ್ರಹಿಕೆಗಳನ್ನು ಬದಲಾವಣೆ ಮಾಡುವ ಸಾಮರ್ಥ್ಯವಿದೆ. ಅಭಿವೃದ್ಧಿಯೇ ನಮ್ಮ ಮಂತ್ರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಗೆಲುವುಸಾಧಿಸ ಹಿನ್ನಲೆಯಲ್ಲಿ ಸ್ವಕ್ಷೇತ್ರ ವಾರಾಣಾಸಿಗೆ ಆಗಮಿಸಿದ ಮೋದಿ, ಕಾಶಿ ವಿಶ್ವನಾಥ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕ್ಷೇತ್ರದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಪೂರ್ವಜರು ಇಡೀ ವಿಶ್ವಕ್ಕೇ ಮಾರ್ಗದರ್ಶನ ನೀಡಿದ್ದರು. ಇಂತಹ ವೈಭವದ ಪರಂಪರೆ, ಸಂಸ್ಕೃತಿಯನ್ನು ನಾವು ಪುನರುಜ್ಜೀವನಗೊಳಿಸಬೇಕಿದೆ ಈ ನಿಟ್ಟಿನಲ್ಲಿ ನಾವು ಸಂಸ್ಕೃತಿ-ಪರಂಪರೆ ವೈಜ್ಞಾನಿಕ ನಾವೀನ್ಯತೆಗೆ ಸಮಾನ ಆದ್ಯತೆ ನೀಡುತ್ತೇವೆ ಎಂದು ಹೇಳಿದರು.

ಕ್ಷೇತ್ರದ ಮತದಾರರಿಗೆ ಧನ್ಯವಾದ ತಿಳಿಸಿರುವ ಪ್ರಧಾನಿ ಮೋದಿ, ದೇಶ ನನ್ನನ್ನು ಪ್ರಧಾನಿಯಾಗಿ ಆಯ್ಕೆ ಮಾಡಿರಬಹುದು, ಆದರೆ ನಿಮಗೆ ನಾನು ಕಾರ್ಯಕರ್ತನೇ ಆಗಿರುತ್ತೇನೆ, ನನಗೆ ನಿಮ್ಮ ಆದೇಶವೇ ಆದ್ಯತೆಯಾಗಿರುತ್ತದೆ ಎಂದರು.

ಇದೇ ವೇಳೆ ಹಾಲಿ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಚುನಾವಣಾ ಗಣಿತದ ವಿರುದ್ಧ ಕೆಮಿಸ್ಟ್ರಿ ಮೇಲುಗೈ ಸಾಧಿಸಿದೆ. ಹೀಗಾಗಿ ಚುನಾವಣಾ ಅಂಕಗಣಿತಕ್ಕಿಂತವನ್ನೂ ಮೀರಿ ಕೆಮಿಸ್ಟ್ರಿಯೊಂದಿದೆ ಎಂಬುದನ್ನು ರಾಜಕೀಯ ವಿಶ್ಲೇಷಕರು ಒಪ್ಪಿಕೊಳ್ಳಬೇಕೆಂದು ಮೋದಿ ಹೇಳಿದ್ದಾರೆ.

PM Modi,Varanasi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ