ಎರಡನೇ ಅಭೂತಪೂರ್ವ ಗೆಲುವು; ಬಿಜೆಪಿ ಹಿರಿಯ ನಾಯಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಪಿಎಂ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸತತ ಎರಡನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿದೆ. ಈ ಮೂಲಕ ವಿಪಕ್ಷ ನಾಯಕರನ್ನು ದಂಗುಬಡಿಸಿದೆ. ಈ ಅಭೂತಪೂರ್ವ ಜಯದ ನಂತರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್​ ಶಾ ಬಿಜೆಪಿ ಹಿರಿಯ ನಾಯಕ ಎಲ್​ಕೆ ಆಡ್ವಾಣಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಬಿಜಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಎಲ್​ಕೆ ಆಡ್ವಾಣಿ ಹಾಗೂ ಅಟಲ್​ ಬಿಹಾರಿ ವಾಜಪೇಯಿ ಪ್ರಮುಖ ಪಾತ್ರವಹಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿತ್ತಿರುವುದಕ್ಕೆ ಮೋದಿ ಹಾಗೂ ಅಮಿತ್​ ಶಾ ಅವರು ಆಡ್ವಾಣಿ ಮನೆಗೆ ತೆರಳಿದ್ದಾರೆ. ಈ ಬಗ್ಗೆ ಮೋದಿ ಟ್ವೀಟ್​ ಮಾಡಿದ್ದಾರೆ.

“ದಶಕಗಳ ಕಾಲ ಆಡ್ವಾಣಿಯಂಥ ನಾಯಕರು ಪಕ್ಷ ಕಟ್ಟಿದ್ದಕ್ಕೆ ಹಾಗೂ ಹೊಸ ಆಲೋಚನೆಗಳನ್ನು ನೀಡಿದ್ದಕ್ಕೆ ಇಂದು ಪಕ್ಷ ಯಶಸ್ಸಿನ ಹಂತ ತಲುಪಿದೆ,” ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.

ಇದರ ಜೊತೆಗೆ ಆರ್​ಎಸ್​​ಎಸ್​ ಹಿರಿಯ ನಾಯಕ ಮುರುಳಿ ಮನೋಹರ್​ ಜೋಶಿ ಅವರನ್ನೂ ಮೋದಿ ಭೇಟಿ ಮಾಡಿದ್ದಾರೆ. “ಭಾರತದ ಶಿಕ್ಷಣವನ್ನು ಉನ್ನತಮಟ್ಟಕ್ಕೆ ಕರೆದೊಯ್ಯಲು ಮುರುಳಿ ಮನೋಹರ್​ ಜೋಶಿ ಕೊಡುಗೆ ಅಪಾರ. ಪಕ್ಷದ ಬಲವರ್ಧನೆಗೆ ಅವರು ಸದಾ ದುಡಿಯುತ್ತಾರೆ. ನನ್ನನ್ನು ಸೇರಿದಂತೆ ಬಿಜೆಪಿಯ ಅನೇಕ ಕಾರ್ಯಕರ್ತರಿಗೆ ಅವರು ಮೆಂಟರ್. ಇಂದು ಬೆಳಿಗ್ಗೆ ಅವರ ಆಶೀರ್ವಾದ ಪಡೆದಿದ್ದೇನೆ​,” ಎಂದು ಮೋದಿ ಬರೆದುಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ