ಎಕ್ಸಿಟ್‌ ಪೋಲ್‌, ಎಕ್ಸಾಕ್ಟ್‌ ಪೋಲ್‌ ಅಲ್ಲ ಎಂದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಇದು ಕೇವಲ ಎಕ್ಸಿಟ್‌ ಪೋಲ್‌, ಎಕ್ಸಾಕ್ಟ್‌ ಪೋಲ್‌ ಅಲ್ಲ. ಮೇ 23ರಂದು ಬಿಜೆಪಿಗೆ ಹಿನ್ನಡೆ ಆಗಲಿದೆ ಎಂದಿದ್ದಾರೆ.

ಎಕ್ಸಿಕ್ಟ್ ಪೋಲ್ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಮತದಾನೋತ್ತರ ಸಮೀಕ್ಷೆ ಪ್ರಕ್ರಿಯೆ ಒಂದು ಪಕ್ಷ ಮತ್ತು ಒಬ್ಬ ವ್ಯಕ್ತಿಯ ಪರ ಅಲೆ ಸೃಷ್ಟಿಯಾಗಿದೆ ಎಂದು ಬಿಂಬಿಸಲು ಸುಳ್ಳು ಅಭಿಪ್ರಾಯವನ್ನು ಸೃಷ್ಟಿಸಲಾಗುತ್ತಿದೆ. ಇದು ಕೇವಲ ಎಕ್ಸಿಟ್​ ಪೋಲ್​, ಎಕ್ಸಾಕ್ಟ್​ ಪೋಲ್​ ಅಲ್ಲ ಎಂದು ಕಿಡಿ ಕಾರಿದ್ದಾರೆ.

ಇವಿಎಂ ಬಗ್ಗೆ ವಿಪಕ್ಷಗಳ ಅನುಮಾನವನ್ನು ಬೆಂಬಲಿಸಿರುವ ಸಿಎಂ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಅಡಿಯಲ್ಲಿ ಇವಿಎಂಗಳ ಕಾರ್ಯದಕ್ಷತೆ ಕುರಿತು ಎಲ್ಲಾ ಪ್ರತಿಪಕ್ಷಗಳು ಕಾಳಜಿ ವ್ಯಕ್ತ ಪಡಿಸುತ್ತಿವೆ. ಸಂಭವನೀಯ ದೋಷಗಳನ್ನು ದೂರ ಮಾಡುವ ಉದ್ದೇಶದಿಂದ ಸಾಂಪ್ರದಾಯಿಕ ಬ್ಯಾಲೆಟ್‌ ಪೇಪರ್‌ ಮತದಾನಕ್ಕಾಗಿ ವಿಪಕ್ಷಗಳು ಸುಪ್ರೀಂ ಕೋರ್ಟ್‌ ಕದವನ್ನು ತಟ್ಟಿವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸೇರಿದಂತೆ ವಿಶ್ವದಾದ್ಯಂತ ಸಾಂಪ್ರದಾಯಿಕ ಬ್ಯಾಲೆಟ್‌ ಪೇಪರ್‌ಗಳನ್ನು ಚುನಾವಣೆಗೆ ಅಯ್ಕೆ ಮಾಡಿವೆ ಎಂದು ಹೇಳಿದ್ದಾರೆ.

ರಾಷ್ಟ್ರದಲ್ಲಿ ಇನ್ನೂ ಮೋದಿ ಅಲೆ ಇದೆ ಎಂಬುದನ್ನು ತೋರ್ಪಡಿಸಲು ಎಕ್ಸಿಟ್‌ ಪೋಲ್‌ ಅನ್ನು ಬಳಕೆ ಮಾಡಲಾಗುತ್ತಿದೆ. ಮೇ 23ರಂದು ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Lok sabha election-2019,exit poll,cm h d kumaraswamy

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ