ಚುನಾವಣೋತ್ತರ ಸಮೀಕ್ಷೆ: ಮತ್ತೊಮ್ಮೆ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ

ನವದೆಹಲಿ: ಲೋಕಸಭಾ ಚುನಾವಣೆ-2019 ರ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದ್ದು, ಸಮೀಕ್ಷೆಗಳ ಪ್ರಕಾರ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವಾಗಿದೆ.

ಸಿ-ವೋಟರ್, ನ್ಯೂಸ್ ಎಕ್ಸ್, ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ ಎನ್ ಡಿಎ 272 ರ ಮ್ಯಾಜಿಕ್ ನಂಬರ್ ನ್ನು ಸುಲಭವಾಗಿ ದಾಟಲಿದ್ದು ಮತ್ತೊಮ್ಮೆ ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ.

ಚುನಾವಣೋತ್ತರ ಸಮೀಕ್ಷಾ ವರದಿಗಳಿ ಈ ಕೆಳಗಿನಂತಿವೆ:

ಸಿ ವೋಟರ್​ ಸಮೀಕ್ಷೆ
ಬಿಜೆಪಿ: 287
ಯುಪಿಎ: 87
ಇತರರು: 127

ನ್ಯೂಸ್​ ನೇಷನ್​ ಸಮೀಕ್ಷೆ
ಬಿಜೆಪಿ: 282ರಿಂದ 290
ಕಾಂಗ್ರೆಸ್​: 118ರಿಂದ 126
ಇತರರು: 130ರಿಂದ 138

ಚಾಣಕ್ಯ ಸಮೀಕ್ಷೆ
ಎನ್ ಡಿಎ: 340
ಯುಪಿಎ: 70
ಇತರರು: 133

ಎಬಿಪಿ ನ್ಯೂಸ್-ಸಿಎಸ್ ಡಿಎಸ್ ಸಮೀಕ್ಷೆ
ಎನ್ ಡಿಎ: 336
ಯುಪಿಎ: 55
ಇತರರು: 148

ನ್ಯೂಸ್ ಎಕ್ಸ್ ಸಮೀಕ್ಷೆ
ಎನ್ ಡಿಎ: 298 ಸ್ಥಾನಗಳು
ಯುಪಿಎ: 118 ಸ್ಥಾನ
ಇತರರು: 126 ಸ್ಥಾನಗಳು ಲಭಿಸಲಿದೆ

ಟೈಮ್ಸ್ ನೌ ಸಮೀಕ್ಷೆ
ಎನ್ ಡಿಎ:306
ಯುಪಿಎ: 132
ಇತರರು: 104 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ.

Exit Polls,lok sabha election-2019,NDA,PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ