ನನಗೂ ಸಿಎಂ ಆಗುವ ಆಸೆಯಿದೆ: ಆದರೆ ಸಧ್ಯಕ್ಕೆ ಸಿಎಂ ಸ್ಥಾನದ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ: ಡಾ.ಜಿ ಪರಮೇಶ್ವರ್

ಕಲಬುರಗಿ: ಮುಖ್ಯಮಂತ್ರಿ ಸ್ಥಾನದಲ್ಲಿ ಹೆಚ್ ಡಿ ಕುಮಾರಸ್ವಾಮಿ ಇದ್ದಾರೆ. ಹಾಗಾಗಿ ಸಧ್ಯಕ್ಕೆ ಸಿಎಂ ಸ್ಥಾನದ ಬಗ್ಗೆ ಚರ್ಚಿಸುವ ಗತ್ಯವಿಲ್ಲ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿಯಾಗಿ ಸಧ್ಯಕ್ಕೆ ಹೆಚ್ ಡಿ ಕುಮಾರಸ್ವಾಮಿ ಇದ್ದಾರೆ. ಹೀಗಾಗಿ ಈಗ ಈ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ಸಿದ್ದರಾಮಯ್ಯ, ಹೆಚ್ ಡಿ ಕೆ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ.

ಸಧ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಆಯ್ಕೆ ನಡೆಯುತ್ತಿಲ್ಲ. ಇನ್ನು ಸಿಎಂ ಸ್ಥಾನಕ್ಕೆ ನಾನೂ ಸೇರಿ ಹಲವರಿಗೆ ಸಿಎಂ ಆಗುವ ಆಸೆಯಿದೆ. ಸಿದ್ದರಾಮಯ್ಯ ಟ್ವೀಟ್ ನಲ್ಲಿ ತಪ್ಪೇನಿದೆ ಎಂದರು.

ಇದೇ ವೇಳೆ ಬಿ ಎಸ್ ವೈ 100 ಸಾರಿ ಜಪಮಾಡಿದರೂ ಸರ್ಕಾರ ಬೀಳಲ್ಲ. ಮೇ 23, 24 ಅಲ್ಲ, ಇನ್ನೂ 4 ವರ್ಷ ಆಡಲಿತ ನಡೆಸಲಿದ್ದೇವೆ. ಯಾವುದೇ ಕಾರಣಕ್ಕೂ ಸಮಿಶ್ರ ಸರ್ಕಾರ ಬೀಳಲ್ಲ ಎಂದು ಹೇಳಿದರು.

kalaburagi,DCM G parameshwar,siddaramaiah

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ