ಕಮಲ್ ಹಾಸನ್ ನಾಲಿಗೆ ಕತ್ತರಿಸಬೇಕು: ಸಚಿವ ಕೆ.ಟಿ.ರಾಜೇಂದ್ರ ಬಾಲಾಜಿ

ಚೆನ್ನೈ: ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ ಹಾಗೂ ಆತನೇ ನಾಥುರಾಮ್ ಗೋಡ್ಸೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ, ಮಕ್ಕಳ್​ ನೀದಿ ಮೈಯಂ ಪಕ್ಷದ ಸಂಸ್ಥಾಪಕ ಕಮಲ್​ ಹಾಸನ್​ ಅವರ ನಾಲಿಗೆ ಕತ್ತರಿಸಬೇಕು ಎಂದು ತಮಿಳುನಾಡಿನ ಹಾಲು ಮತ್ತು ಡೇರಿ ಅಭಿವೃದ್ಧಿ ಸಚಿವ ಕೆ.ಟಿ.ರಾಜೇಂದ್ರ ಬಾಲಾಜಿ ಆಗ್ರಹಿಸಿದ್ದಾರೆ.

ಎಐಎಡಿಎಂಕೆ ಹಿರಿಯ ಮುಖಂಡರಾಗಿರುವ ರಾಜೇಂದ್ರ ಬಾಲಾಜಿ, ಕಮಲ್​ಹಾಸನ್​ ಅವರ ನಾಲಿಗೆಯನ್ನು ಕತ್ತರಿಸಬೇಕು. ಹಿಂಸಾಚಾರ ಅವರು ಪ್ರಚೋದನೆ ನೀಡುತ್ತಿದ್ದಾರೆ. ಹೀಗಾಗಿ ಅವರ ಪಕ್ಷ ಎಂಎನ್​ಎಂನ್ನು ಚುನಾವಣೆಯಿಂದ ನಿಷೇಧಿಸಬೇಕು. ಹಾಗೇ ಚುನಾವಣಾ ಆಯೋಗ ಕಮಲ್​ ಹಾಸನ್​ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ. ಕಮಲ್​ ಹಾಸನ್​ ಅಲ್ಪಸಂಖ್ಯಾತರ ಮತಕ್ಕಾಗಿ ಇಂತ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

Tamil Nadu minister says Kamal Haasan’s ‘tongue should be cut off’ for Nathuram Godse remark

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ