ಗೋಡ್ಸೆ ಭಾರತದ ಮೊದಲ ಹಿಂದೂ ಉಗ್ರ ಎಂದ ನಟ ಕಮಲ್ ಹಾಸನ್

ಚೆನ್ನೈ: ಮಹಾತ್ಮಾ ಗಾಂಧಿಯವರನ್ನು ಹತ್ಯೆಗೈದ ನಾಥೋರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಉಗ್ರ ಎಂದು ಹೇಳುವ ಮೂಲಕ ನಟ, ರಾಜಕಾರಣಿ ಕಮಲ್ ಹಾಸನ್ ಹೊಸ ವಿವಾದ ಸೃಷ್ಟಿಸಿದ್ದಾರೆ.

ಅರವಕುರುಚ್ಚಿ ವಿಧಾನಸಭಾ ಉಪಚುನಾವಣೆ ಹಿನ್ನಲೆಯಲ್ಲಿ ತಮ್ಮ ಮಕ್ಕಳ್ ನೀದಿಮೈಯ್ಯಂ ಪಕ್ಷದ ಪರವಾಗಿ ಚುನಾವಣ ಅಪ್ರಚಾರ ರ್ಯಾಲಿಯಲ್ಲಿ ಮಾತ್ನಾಡಿದ ಕಮಲ್ ಹಾಸನ್, ಸ್ವತಂತ್ರ ಭಾರತದ ಮೊದಲ ಉಗ್ರ ಓರ್ವ `ಹಿಂದೂ’ ಆಗಿದ್ದ. ಮುಸ್ಲಿಂ ಪ್ರಾಬಲ್ಯ ಹೊಂದಿರುವ ಪ್ರದೇಶ ಎಂಬ ಕಾರಣಕ್ಕೆ ನಾನು ಈ ಮಾತು ಹೇಳುತ್ತಿಲ್ಲ. ಗಾಂಧಿ ಪ್ರತಿಮೆಯ ಮುಂದೆ ನಿಂತು ಈ ಮಾತು ಹೇಳುತ್ತಿದ್ದೇನೆ. ಆ ಉಗ್ರನ ಹೆಸರು ನಾಥೂರಾಮ್ ಗೋಡ್ಸೆ ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಬಾಬ್ರಿ ಮಸೀದ್ ಬಗ್ಗೆ ಮೊದಲು ಧ್ವನಿ ಎತ್ತಿದ್ದು ನಾನು. ಅಲ್ಲದೆ ಒಳ್ಳೆಯ ಹೃದಯವಿರುವ ಮುಸಲ್ಮಾನರು ಎಂದಿಗೂ ಭಯೋತ್ಪಾದನೆಗೆ ಬೆಂಬಲ ನೀಡಲ್ಲ. ಈ ಬಗ್ಗೆ ಅವರು ಅವರ ಶ್ರೇಷ್ಠ ಗ್ರಂಥವನ್ನು ಮುಟ್ಟಿ ಹೇಳುತ್ತಾರೆ. ತ್ರಿವರ್ಣ ಧ್ವಜವೇ ಎಲ್ಲಕ್ಕಿಂತ ಶ್ರೇಷ್ಠವಾದದ್ದು. ಆದರೆ ತ್ರಿವರ್ಣದಲ್ಲಿ ಕೇವಲ ಒಂದು ಬಣ್ಣ ಉಳಿದ ಬಣ್ಣಗಳ ಮೇಲೆ ತನ್ನ ಹಿಡಿತವನ್ನು ಸಾಧಿಸುವಂತೆ ಆಗಬಾರದು. ಒಂದು ವೇಳೆ ಈ ರೀತಿಯಾದಲ್ಲಿ ನಾವು ಅದನ್ನು ತಡೆಯಬೇಕು. ದೇಶವನ್ನು ಒಡೆಯಲು ಪ್ರಯತ್ನಿಸುವ ಗುಂಪನ್ನು ಅಥವಾ ವ್ಯಕ್ತಿಯನ್ನು ಅಧಿಕಾರದಿಂದ ಇಳಿಸಬೇಕು ಎಂದಿದ್ದಾರೆ.

ಹೆಮ್ಮೆಯ ಭಾರತೀಯರಲ್ಲಿ ನಾನೂ ಒಬ್ಬನು. ಹಾಗೇ ಭಾರತದಲ್ಲಿ ಸಮಾನತೆಯನ್ನು ಹಾಗೂ ಭಾರತದ ಧ್ವಜದಲ್ಲಿರುವ ಮೂರು ಬಣ್ಣಗಳು ಸೂಚಿಸುವ ವಿವಿಧ ಸಂಕೇತಗಳು ಹಾಗೇ ಉಳಿಯಬೇಕೆಂದು ಅಪೇಕ್ಷಿಸುವವರಲ್ಲಿ ನಾನು ಒಬ್ಬನು ಎಂದು ತಿಳಿಸಿದರು.

Indias first terrorist was hindu: Kamal haasan

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ