ದೇವೇಗೌಡರೇ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದರು: ಮಾಜಿ ಸಿಎಂ ಸಿದ್ದರಾಮಯ್ಯ

ಕಲಬುರಗಿ: ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಹೋಗಿಲ್ಲವೇ ಎಂದು ಬಿಜೆಪಿ ನಾಯಕ ಆರ್ ಅಶೋಕ್ ಪ್ರಶ್ನಿಸುತ್ತಾರೆ. ಆದರೆ ನಾನು ಜೆಡಿಎಸ್ ನ್ನು ಬಿಟ್ಟಿಲ್ಲ.

ದೇವೇಗೌಡರೇ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದರು. ಹಾಗಾಗಿ ನನಗೂ ಉಮೇಶ್ ಜಾಧವ್ ಗೂ ವ್ಯತ್ಯಾಸವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಚಿಂಚೋಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಜೆಡಿಎಸ್ ಬಿಟ್ಟದ್ದು ಯಾಕೆ ಎಂದು ಬಿಜೆಪಿಯ ಆರ್. ಅಶೋಕ್ ಕೇಳುತ್ತಿದ್ದಾರೆ. ಅಶೋಕ್‌ಗೆ ಸುಳ್ಳು ಗೊತ್ತಿಲ್ಲ, ಸತ್ಯವೂ ಗೊತ್ತಿಲ್ಲ, ಏನೂ ಗೊತ್ತಿಲ್ಲ. ನಾನು ಜೆಡಿಎಸ್ ಬಿಟ್ಟು ಹೋಗಿರಲಿಲ್ಲ. ಅಹಿಂದ ಚುಟುವಟಿಕೆ ನಡೆಸಿದ್ದಕ್ಕೆ ನನ್ನನ್ನ ದೇವೇಗೌಡರು ಜೆಡಿಎಸ್‌ನಿಂದ ಉಚ್ಛಾಟನೆ ಮಾಡಿದ್ದರು. ಡಾ. ಉಮೇಶ್ ಜಾಧವ್ ಕಾಂಗ್ರೆಸ್ ಬಿಟ್ಟಿರುವುದಕ್ಕೂ ನಾನು ಜೆಡಿಎಸ್ ಬಿಟ್ಟಿರೋದಕ್ಕೂ ವ್ಯತ್ಯಾಸವಿದೆ ಎಂದರು.

ಇದೇ ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಪ್ಲಸ್‍ಗಿಂತ ಮೈನಸ್ ಆಗ್ತಿದೆ ಎಂಬ ಕೆಆರ್ ಪೇಟೆ ಶಾಸಕ ನಾರಾಯಣಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾವೇನು ನಾರಾಯಣಗೌಡನನ್ನು ಕೇಳಿಕೊಂಡು ಮೈತ್ರಿ ಮಾಡಿಕೊಂಡಿಲ್ಲ. ಅವರ ಮಾತಿಗೆಲ್ಲ ಬೆಲೆ ಕೊಡುವುದ್ದಕ್ಕೆ ಆಗಲ್ಲ. ಹೈಕಮಾಂಡ್ ತೀರ್ಮಾನದಂತೆ ಕುಮಾರಸ್ವಾಮಿ, ದೇವೇಗೌಡರ ಜೊತೆ ಮಾತುಕತೆ ಮಾಡಿ ಸರ್ಕಾರ ರಚನೆ ಮಾಡಿದ್ದೇವೆ ಎಂದರು.

Siddaramaiah,kalaburagi,R ashok

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ