ಐಎನ್​ಎಸ್​ ವಿರಾಟ್​ ಒಂದು ಯುದ್ಧನೌಕೆ; ಇದು ಕ್ರೂಸ್​ ಹಡಗಲ್ಲ: ರಾಹುಲ್ ಗಾಂಧಿ ಗುಡುಗು

ಭಾಟಿಂಡಾ: ಐಎನ್​ಎಸ್​ ವಿರಾಟ್​ ಒಂದು ಯುದ್ಧನೌಕೆ. ಇದು ಕ್ರೂಸ್​ ಹಡಗಲ್ಲ, ಅದರಲ್ಲಿ ವಿಹರಿಸಲು ಸಾಧ್ಯವೇ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಶ್ನಿಸಿದ್ದಾರೆ.

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಐಎನ್​ಎಸ್​ ವಿರಾಟ್​ ಯುದ್ಧನೌಕೆಯಲ್ಲಿ ಅಂದಿನ ಪ್ರಧಾನಿ ರಾಜೀವ್​ ಗಾಂಧಿ ಮತ್ತವರ ಕುಟುಂಬದ ಸದಸ್ಯರಲ್ಲದೆ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಕುಟುಂಬದವರು ಹಾಗೂ ರಾಜೀವ್​ ಗಾಂಧಿ ಅವರ ಮತ್ತಿತರ ಆಪ್ತರು ಲಕ್ಷದ್ವೀಪ್​ನಲ್ಲಿ ವಿಹರಿಸಿದ್ದರು ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್​ ಗಾಂಧಿ, ವಿಮಾನವನ್ನು ಹೊತ್ತೊಯ್ಯುವ ಸಾಮರ್ಥ್ಯದ ಐಎನ್​ಎಸ್​ ವಿರಾಟ್​ ಯುದ್ಧ ನೌಕೆಯಲ್ಲಿ ವಿಹರಿಸಲು ಸಾಧ್ಯವೇ? ಅದೇನು ಕ್ರೂಸ್​ ಹಡಗು ಎಂದುಕೊಂಡಿದ್ದೀರಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ವಾಸ್ತವವಾಗಿ 1987ರಲ್ಲಿ ಪ್ರಧಾನಿಯಾಗಿದ್ದ ರಾಜೀವ್​ ಗಾಂಧಿ ಅಧಿಕೃತ ಪ್ರವಾಸಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಲಕ್ಷದ್ವೀಪದಲ್ಲಿ ವಿಹರಿಸಿದ್ದೆವು. ಆದರೆ, ಇದಕ್ಕಾಗಿ ಐಎನ್​ಎಸ್​ ವಿರಾಟ್​ ಯುದ್ಧನೌಕೆಯನ್ನು ಬಳಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಕುಟುಂಬದ ಬಗ್ಗೆ ಪ್ರಧಾನಿ ಮೋದಿಗೆ ಪೂರ್ವಾಗ್ರಹ ಇದೆ. ಚುನಾವಣಾ ಪ್ರಚಾರ ಸಭೆಗಳಲ್ಲಿ ತಮ್ಮ ತಂದೆ ರಾಜೀವ್​ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಾಡುವ ಆರೋಪಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ನಮ್ಮ ಕುಟುಂಬದ ಬಗ್ಗೆ ಪೂರ್ವಾಗ್ರಹಪೀಡಿತರಾಗಿದ್ದಾರೆ. ಆದರೆ, ನನಗೆ ನನ್ನ ಕುಟುಂಬದ ಬಗ್ಗೆ ಯಾವುದೇ ಪೂರ್ವಾಗ್ರಹಗಳಿಲ್ಲ. ನಾನು ನನ್ನ ತಂದೆ, ಅಜ್ಜಿ ಮತ್ತು ಮುತ್ತಾತನ ಬಗ್ಗೆ ಮೋದಿ ಅವರಷ್ಟು ಯೋಚಿಸುವುದಿಲ್ಲ. ಬಹುಶಃ ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳಲು ನಮ್ಮ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುತ್ತಾರೆ ಆದರೆ, ಅವರಿಗೆ ಶುಭ ಕೋರುತ್ತೇನೆ ಎಂದು ರಾಹುಲ್ ತಿಳಿಸಿದ್ದಾರೆ.

‘Why would one holiday on an aircraft carrier?’: Rahul Gandhi on PM’s INS Viraat remark

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ