ನಿಖಿಲ್ ಅದಾಗಲೇ ಚುನಾವಣೆಯಲ್ಲಿ ಗೆದ್ದಿದ್ದಾರೆ; ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ: ಶಾಸಕ ನಾರಾಯಣಗೌಡ

ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್​​ ಕುಮಾರಸ್ವಾಮಿ ಚುನಾವಣೆಯಲ್ಲಿ ಅದಾಗಲೇ ಗೆದ್ದಾಗಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ ಎಂದು ಕೆ.ಆರ್​ ಪೇಟೆ ಶಾಸಕ ನಾರಯಣಗೌಡ ಹೇಳಿಕೆ ನೀಡಿದ್ದಾರೆ.

ಮಂಡ್ಯದ ಕೆ.ಆರ್.​ ಪೇಟೆಯಲ್ಲಿ ನಡೆದ ಜೆಡಿಎಸ್​​​​​​​ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ನಾರಾಯಣಗೌಡ, ಕುಮಾರಣ್ಣ ಸಿಎಂ ಆಗಿರುವುದರಿಂದ ನಮಗೆ ಯಾವುದೇ ಭಯವೂ ಇಲ್ಲ. ನಿಖಿಲ್ ಮಂಡ್ಯದಲ್ಲಿ ಅದಾಗಲೇ ಗುಲುವು ಸಾಧಿಸಿದ್ದಾರೆ.ಅವರು ಈಗಾಗಲೇ ಮಂಡ್ಯ ಸಂಸದರಾಗಿದ್ದಾರೆ. ಬೇಕಾದರೆ ನಾನು ಚಾಲೆಂಜ್​​ ಮಾಡುತ್ತೇನೆ. ನಿಖಿಲ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಖಿಲ್​​ ಈಗಾಗಲೇ ಜಯ ಗಳಿಸಿದ್ದಾರೆ. ಅದಕ್ಕಾಗಿಯೇ ಈ ಸಮಾರಂಭದಲ್ಲಿ ಸನ್ಮಾನ ಮಾಡುತ್ತಿದ್ದೇವೆ. ಇದು ಕೇವಲ ಸಣ್ಣ ಸಂಭ್ರಮವಾಗಿದ್ದು, 23 ನಂತರ ದೊಡ್ಡ ಮಟ್ಟದ ಸಂಭ್ರಮಾಚರಣೆ ಮಾಡುತ್ತೇವೆ. ಅವರು ಈ ಬಾರಿ ಗೆಲ್ಲುವುದು ಖಚಿತವಾಗಿದೆ. ಬೇಕಾದರೆ ಬೆಟ್ಟಿಂಗ್​​ ಕಟ್ಟುತ್ತೇನೆ ಎಂದು ಶಾಸಕ ಸವಾಲು ಹಾಕಿದ್ದಾರೆ.

lok sabha election,mandya,nikhil kumaraswamy,narayanagowda

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ