ಸುಮಲತಾ ಅಂಬರೀಶ್ ಗೆ ಸಿಆರ್ ಪಿ ಎಫ್ ಯೋಧ ಹಾಕಿದ ಮತ ಅಸಿಂಧು

ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆ ಸಿಆರ್ ಪಿಎಫ್ ಯೋಧನೊಬ್ಬ ಹಾಕಿದ್ದ ಮೊದಲ ಅಂಚೆ ಮತವನ್ನು ಅಸಿಂಧುಗೊಳಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಮಂಡ್ಯ ಮೂಲದ ಸಿರ್ ಪಿಎಫ್ ಯೋಧ ರಾಜನಾಯಕ ಎಂಬುವವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣದಿಂದ ಸ್ಪರ್ಧಿಸಿರುವ ಸುಮಲತಾ ಅಂಬರೀಷ್ ಗೆ ವೋಟ್ ಮಾಡಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.

ಇದಕ್ಕೆ ಸಂಬಂಧಪಟ್ಟಂತೆ ಮಂಡ್ಯ ಮೂಲದ ವಕೀಲರಾದ ಕಿರಣ್‌ ಅವರು ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದರು, ದೂರನ್ನು ಪರೀಶಿಲನೆ ನಡೆಸಿದ ಆಯೋಗ ಮತದಾನದ ಗೌಪ್ಯತೆಯನ್ನು ಉಲ್ಲಂಘನೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಆಯೋಗಕ್ಕೆ ಮೇ 23ರಂದು ನಡೆಯುವ ಮತ ಏಣಿಕೆ ವೇಳೆಯಲ್ಲಿ ಯೋಧ ರಾಜನಾಯಕ ಅವರ ಪೊಸ್ಟಲ್‌ ಮತವನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ಆದೇಶ ಹೊರಡಿಸಿದೆ.

Election Committee,sumalatha,first vote,invalid

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ