ಹಾವು ಕಚ್ಚಿ ಮಹಿಳೆಯೊಬ್ಬರ ಸಾವು

ಮಂಡ್ಯ, ಮೇ 8-ಗದ್ದೆಯಲ್ಲಿ ಭತ್ತಕ್ಕೆ ನೀರು ಹಾಯಿಸುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಪಾಂಡವಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಲಕ್ಷ್ಮೀಸಾಗರ ಗ್ರಾಮದ ಸಾವಿತ್ರಮ್ಮ(50) ಮೃತ ದುರ್ದೈವಿ.

ನಿನ್ನೆ ಮಧ್ಯಾಹ್ನ ತಮ್ಮ ಗದ್ದೆಯಲ್ಲಿ ಭತ್ತಕ್ಕೆ ನೀರು ಹಾಯಿಸಲು ಹೋಗಿದ್ದ ವೇಳೆ ಅವರಿಗೆ ಹಾವು ಕಚ್ಚಿದೆ. ಈ ವೇಳೆ ನೋವಿನಿಂದ ಕಿರುಚಿಕೊಂಡ ಸಾವಿತ್ರಮ್ಮ ಚೀರಾಟ ಕೇಳಿದ ಪಕ್ಕದ ಜಮೀನಿನ ಸ್ವಾಮಿಗೌಡ ಎಂಬುವರು ಆಕೆಯನ್ನು ಆಸ್ಪತ್ರೆಗೆ ಸೇರಿಸಲು ಇತರರನ್ನು ಕರೆತರುವಷ್ಟರಲ್ಲಿ ಸಾವಿತ್ರಮ್ಮ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಪಾಂಡವಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ