ರೈಲಿನಲ್ಲಿ ಬೆಂಕಿ-ಗಾಬರಿಯಾದ ಪ್ರಯಾಣಿಕರು

ಕೋಲಾರ, ಮೇ 7- ಬ್ರೇಕ್ ಜಾಮ್ ಆಗಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಹಮ್ ಸಫರ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಗಾಬರಿಯಾದ ಪ್ರಯಾಣಿಕರು ಲಗೇಜ್ ಸಮೇತ ಕೆಳಗಿಳಿದು ಬಂದಿದ್ದರು. ನಂತರ ರೈಲಿನಲ್ಲಿ ಉಂಟಾಗಿದ್ದ ತಾಂತ್ರಿಕ ದೋಷ ಸರಿಪಡಿಸಿದ ಸಿಬ್ಬಂದಿ ರೈಲು ತೆರಳಲು ಅನುವು ಮಾಡಿಕೊಟ್ಟರು.

ಹಮ್ ಸಫರ್ ರೈಲು ಇಂದು ಬಂಗಾರಪೇಟೆ ನಿಲ್ದಾಣ ತಲುಪುವಷ್ಟರಲ್ಲಿ ಅದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದ ಪ್ರಯಾಣಿಕರಿಗೆ ಆತಂಕ ಎದುರಾಗಿತ್ತು.

ಕೂಡಲೇ ಸಿಬ್ಬಂದಿ ರೈಲಿನ ತಾಂತ್ರಿಕ ದೋಷ ಸರಿಪಡಿಸಿದ್ದರಿಂದ 15 ನಿಮಿಷ ತಡವಾಗಿ ರೈಲು ಹೊರಟಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ