ನದಿಗೆ ಅಪ್ಪಳಿಸಿದ ಬೋಯಿಂಗ್ 737 ವಿಮಾನ; 136 ಪ್ರಯಾಣಿಕರು ಅಪಾಯದಿಂದ ಪಾರು

ಪ್ಲೋರಿಡಾ:  ಅಮೇರಿಕದ ಬೊಯಿಂಗ್​ 737 ವಿಮಾನ ರನ್​​ವೇಯಿಂದ ಜಾರಿ ಸಮೀಪದ ಸೆಂಟ್​ ಜಾನ್​​​​ ನದಿಗೆ ಇಳಿದಿರುವ ಘಟನೆ ಶುಕ್ರವಾರ ನಡೆದಿದೆ ಎನ್ನಲಾಗಿದೆ. ವಿಮಾನದಲ್ಲಿ 136 ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಎಲ್ಲರು ಅಪಾಯದಿಂದ ಅಪಾಯದಿಂದ ಪಾರಾಗಿದ್ದಾರೆ ಎಂದು ಅಮೇರಿಕದ ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ 21 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ಗ್ವಾಟೆನಾಮದಿಂದ  ಬಂದ ವಿಮಾನ ಪ್ಲೋರಿಡಾದ ಜಾಕ್ಸನ್​​​ವಿಲ್ಲೇ ನೌಕಾನೆಲೆಯ ವಿಮಾನ  ನಿಮ್ದಾಣದಲ್ಲಿ ಇಳಿಯುವಾಗ ರನ್​ ವೇ ಯಿಂದ ಜಾರಿ ನದಿಗೆ ಅಪ್ಪಳಿಸಿದೆ. ನಿನ್ನೆ ರಾತ್ರಿ (ಶುಕ್ರವಾರ) 9.40ರಲ್ಲಿ ಈ ಘಟನೆ ಸಂಭವಿಸಿರುವುದು ತಿಳಿದುಬಂದಿದೆ.

ಬಂದರು ಘಟಕ ಕೂಡಲೇ ಸ್ಥಳಕ್ಕೆ ಆಗಮಿಸಿ ಸಹಾಯಕ್ಕೆ ನೆರವಾಯಿತು. ವಿಮಾನ ಆಳವಿಲ್ಲದ ನೀರಿನಲ್ಲಿ ತೇಲುತ್ತಿದ್ದು ಮುಳುಗಲಿಲ್ಲ. ಹೀಗಾಗಿ ವಿಮಾನದಲ್ಲಿದ್ದ ಯಾರಿಗೂ ಪ್ರಾಣ ಹಾನಿಯಾಗದೆ ಸುರಕ್ಷಿತವಾಗಿದ್ದಾರೆ ಎಂದು ನೌಕಾ ಏರ್ ಸ್ಟೇಷನ್ ಜಾಕ್ಸನ್ವಿಲ್ಲೆ  ಮಾಹಿತಿ ನೀಡಿದ್ದಾರೆ. ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ಬಹುದೊಡ್ಡ ವಿಮಾನದುರಂತದ ಘಟನೆ ಸಂಭವಿಸುತ್ತಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ