ಫಾನಿ ಚಂಡಮಾರುತ: ತಮಿಳುನಾಡು, ಆಂಧ್ರದಲ್ಲಿ ಬಿರುಗಾಳಿ ಸಹಿತ ಮಳೆ

ಚೆನ್ನೈ: ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಫಾನಿ ಚಂಡಮಾರುತ ತೀವ್ರವಾಗುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಫಾನಿ ಚಂಡಮಾರುತವು ವಾಯುವ್ಯ ದಿಕ್ಕಿನಲ್ಲಿ ಗಂಟೆಗೆ 16 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದು, ಏಪ್ರಿಲ್ 30 ರ ನಂತರ ಈಶಾನ್ಯ ದಿಕ್ಕಿನಲ್ಲಿ ಪುನರಾವರ್ತನೆಯಾಗಲಿದೆ.

1,050 ಕಿ ಮೀ ವೇಗದಲ್ಲಿ ತಮಿಳುನಾಡಿನ ಚೆನ್ನೈ ಆಗ್ನೇಯ ಭಾಗದಲ್ಲಿ ಫಾನಿ ಚಂಡಮಾರುತ ಕೇಂದ್ರೀಕರಿಸಲಿದೆ ಮತ್ತು ಆಂಧ್ರ ಪ್ರದೇಶದ ಮಚಲೀಪಟ್ಟಣದ ದಕ್ಷಿಣ-ಆಗ್ನೇಯ ಭಾಗದಲ್ಲಿ 1,230 ಕಿ ಮೀ ವೇಗದಲ್ಲಿರಲಿದೆ ಎಂದು ಹೇಳಿದೆ.

ಚಂಡಮಾರುತದ ಪ್ರಭಾವದಿಂದಾಗಿ ಏ. 29 ಮತ್ತು 30 ರಂದು ಕೇರಳದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮುಂದುವರಿದು ತಮಿಳುನಾಡು ಕರಾವಳಿ ಮತ್ತು ಆಂಧ್ರಪ್ರದೇಶದ ಕರಾವಳಿ ತೀರಕ್ಕೂ ಏ. 30 ಮತ್ತು ಮೇ 1ರಂದು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಸೈಕ್ಲೋನ್ ಪ್ರಭಾವದಿಂದ ತಮಿಳುನಾಡು, ಆಂಧ್ರಪ್ರದೇಶದ ಜತೆಗೆ ರಾಜ್ಯದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಬಹುದೆಂದು ಅಂದಾಜಿಸಲಾಗಿದೆ. ಇದರ ಪ್ರಭಾವವು ರಾಜ್ಯದ ಮೇಲೂ ಆಗಲಿದ್ದು, ಬೆಂಗಳೂರಿನಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Phani Cyclone,tamil nadu,andrapradesh

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ