ಮೂರನೇ ಹಂತದ ಮತದಾನ ಆರಂಭ; ರಾಜ್ಯದಲ್ಲಿ ಹಲವೆಡೆ ಕೈಕೊಟ್ಟ ಮತಯಂತ್ರ

ಬೆಂಗಳೂರು: ಕರ್ನಾಟಕದಲ್ಲಿ ಎರಡನೇ ಹಂತದನ ಮತದಾನ ಆರಂಭವಾಗಿದೆ. 14 ಕ್ಷೇತ್ರಗಳಲ್ಲಿ ಮತದಾನ ಕೂಡ ಆರಂಭವಾಗಿದೆ. ಆದರೆ, ಹಲವು ಕಡೆಗಳಲ್ಲಿ ಮತಯಂತ್ರ ಕೈಕೊಟ್ಟಿದೆ. ಇದರಿಂದ ಮತದಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯಲ್ಲಿ ಇವಿಎಂ ಕೈಕೊಟ್ಟಿದೆ. ಶಿರಮಗೊಂಡನಹಳ್ಳಿ ಗ್ರಾಮದ ಸಖಿ ಮತಗಟ್ಟೆಯಲ್ಲಿ ಯಂತ್ರ ಕೈಕೊಟ್ಟಿದೆ. ಹಾಗಾಗಿ ಒಂದು ಗಂಟೆ ಮತದಾನ ಸ್ಥಗಿತಗೊಂಡಿತ್ತು. ನಂತರ ಸಿಬ್ಬಂದಿ ಹೊಸ ಯಂತ್ರ ಅಳವಡಿಸಿದ್ದಾರೆ.

ಬಾಗಲಕೋಟೆ ನಗರದ ಸರ್ಕಾರಿ ಶಾಲೆಯಲ್ಲಿನ ಮತಯಂತ್ರ ಕೈಕೊಟ್ಟಿದೆ. 8 ಗಂಟೆಯಾದರೂ ಮತದಾನ ಆರಂಭವಾಗಲಿಲ್ಲ. ಹಾಗಾಗಿ, ಮತದಾನ ಮಾಡಲು ಬಂದ ಕೆಲವರು ವಾಪಸು ತೆರಳಿದ್ದಾರೆ.

ವಿಜಯಪುರ ಜಿಲ್ಲೆಯ ಚಡಚಣ ಮತಗಟ್ಟೆ ಸಂಖ್ಯೆ 57ರಲ್ಲಿ ಮತದಾನ ಆರಂಭವಾಗಿಲ್ಲ. ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಮತದಾನ ವಿಳಂಬವಾಗಿದೆ. ಹಾಗಾಗಿ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ಇವತ್ತು ನಡೆಯುತ್ತಿದೆ. ಕರ್ನಾಟಕ ಸೇರಿ 13 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ 117 ಲೋಕಸಭಾ ಕ್ಷೇತ್ರಗಳಲ್ಲಿ ಜನರು ಮತ ಚಲಾಯಿಸಲಿದ್ದಾರೆ. ಇದರಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳೂ ಒಳಗೊಂಡಿವೆ. ಏಪ್ರಿಲ್ 18ರಂದು ಚುನಾವಣೆ ನಡೆಯಬೇಕಿದ್ದ ತ್ರಿಪುರಾ ಈಸ್ಟ್ ಕ್ಷೇತ್ರದಲ್ಲಿ ಮತದಾನ ಮುಂದೂಡಿಕೆಯಾಗಿತ್ತು. ಅದೂ ಇವತ್ತೇ ನಡೆಯಲಿದೆ.

ಕರ್ನಾಟಕದ ಜೊತೆಗೆ ಅಸ್ಸಾಮ್, ಬಿಹಾರ, ಗೋವಾ, ಗುಜರಾತ್, ಕೇರಳ, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್​ಗಡ, ಜಮ್ಮು-ಕಾಶ್ಮೀರ, ತ್ರಿಪುರಾ, ದಮನ್ ಅಂಡ್ ಡಿಯು ಮತ್ತು ದಾದ್ರಾ ನಾಗರ್ ಹವೇಲಿಯಲ್ಲಿ ಮತದಾನವಾಗಲಿದೆ. ಒಡಿಶಾದ 6 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ 42 ವಿಧಾನಸಭಾ ಕ್ಷೇತ್ರಗಳಿಗೂ ಇವತ್ತೇ ಮತದಾನವಾಗಲಿದೆ. ಗುಜರಾತ್​(26), ಕೇರಳ(20), ಕರ್ನಾಟಕ(14), ಮಹಾರಾಷ್ಟ್ರ(14) ಹಾಗೂ ಉತ್ತರ ಪ್ರದೇಶ(10) ಮೂರನೇ ಹಂತದಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಮತದಾನವಾಗುತ್ತಿರುವ ರಾಜ್ಯಗಳಾಗಿವೆ. ಹಾಗೆಯೇ, ಗೋವಾದ 3 ಮತ್ತು ಗುಜರಾತ್​ನ 2 ವಿಧಾನಸಭಾ ಕ್ಷೇತ್ರಗಳಿಗೂ ಇವತ್ತೇ ಉಪಚುನಾವಣೆಯಾಗುತ್ತಿದೆ.

ಕರ್ನಾಟಕದಲ್ಲಿ ಅಂತಿಮ ಹಂತದ ಮತದಾನ ಇದಾಗಲಿದೆ. ಏಪ್ರಿಲ್ 18ರಂದು ದಕ್ಷಿಣ ಕರ್ನಾಟಕದ ಜನರು ಮತ ಚಲಾಯಿಸಿದರೆ, ಇಂದು ಉತ್ತರ ಭಾಗದವರು ತಮ್ಮ ಪ್ರತಿನಿಧಿಗಳನ್ನ ಆರಿಸಲಿದ್ದಾರೆ.

ಕಣದಲ್ಲಿರುವ ಪ್ರಮುಖರು:
ಅಮಿತ್ ಶಾ(ಬಿಜೆಪಿ) – ಗಾಂಧಿನಗರ, ಗುಜರಾತ್
ಶರದ್ ಯಾದವ್(ಆರ್​ಜೆಡಿ) – ಬಿಹಾರ
ಶ್ರೀಪಾದ ನಾಯ್ಕ್(ಬಿಜೆಪಿ) – ಗೋವಾ
ಆಲ್ಫೋನ್ಸ್ ಕಣ್ಣನ್​ತ್ತಾನಂ(ಬಿಜೆಪಿ) – ಎರ್ನಾಕುಲಂ, ಕೇರಳ
ಶಶಿ ತರೂರ್(ಕಾಂಗ್ರೆಸ್) – ತಿರುವನಂತಪುರಂ
ರಾಹುಲ್ ಗಾಂಧಿ(ಕಾಂಗ್ರೆಸ್) – ವಯನಾಡ್
ಅನಂತ್ ಗೀತೆ (ಶಿವಸೇನೆ) – ರಾಯಗಡ್, ಮಹಾರಾಷ್ಟ್ರ
ಸುಪ್ರಿಯಾ ಸುಲೆ (ಕಾಂಗ್ರೆಸ್) – ಬಾರಾಮತಿ, ಮಹಾರಾಷ್ಟ್ರ
ಮಹೇಶ್ ಸಾಹೂ (ಬಿಜೆಡಿ) – ಧೇನಕನಲ್, ಒಡಿಶಾ
ಡಾ. ಸಂಬಿತ್ ಪಾತ್ರ(ಬಿಜೆಪಿ) – ಪುರಿ, ಒಡಿಶಾ
ಡಾ. ಮುಲಾಯಂ ಸಿಂಗ್ ಯಾದವ್(ಎಸ್​ಪಿ) – ಮೈನ್​ಪುರಿ, ಉ.ಪ್ರ.
ಶಿವಪಾಲ್ ಯಾದವ್(ಪಿಎಸ್​ಪಿ) – ಫಿರೋಜಾಬಾದ್, ಉ.ಪ್ರ.
ವರುಣ್ ಗಾಂಧಿ(ಬಿಜೆಪಿ) – ಪಿಲಿಭಿಟ್, ಉ.ಪ್ರ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ