ವಿವಿಪ್ಯಾಟ್ ಯಂತ್ರದಲ್ಲಿ ಹಾವು ಪತ್ತೆ; ಕಣ್ಣೂರು ಲೋಕಸಭಾ ಕ್ಷೇತ್ರದಲ್ಲಿ ಕೆಲಕಾಲ ಮತದಾನ ಸ್ಥಗಿತ

ಕಣ್ಣೂರು: ಲೋಕಸಭಾ ಚುನಾವಣೆಗೆ 3ನೇ ಹಂತದ ಮತದಾನ ನಡೆಯುತ್ತಿದ್ದು, ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ನಡುವೆ ಕೇರಳದ ಕಣ್ಣೂರು ಲೋಕಸಭೆ ಕ್ಷೇತ್ರದ ಮತಗಟ್ತೆಯೊಂದರಲ್ಲಿ ವಿವಿಪ್ಯಾಟ್ ಯಂತ್ರದೊಳಗೆ ಹಾವೊಂದು ಪತ್ತೆಯಾಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಇಲ್ಲಿನ ಮೇಯಿಲ್ ಕಂದಾಕ್ಕೈನಲ್ಲಿನ ಮತಗಟ್ಟೆಯಲ್ಲಿ ವಿವಿಪ್ಯಾಟ್​ ಯಂತ್ರದೊಳಗೆ ಸಣ್ಣ ಹಾವು ಪತ್ತೆಯಾಗಿದೆ. ಹಾವು ಪತ್ತೆಯಾದ ಹಿನ್ನೆಲೆಯಲ್ಲಿ ಮತದಾರರು ಮತ್ತು ಚುನಾವಣೆ ಸಿಬ್ಬಂದಿ ಆತಂಕಕ್ಕೊಳಗಾಗಿದ್ದಾರೆ. ಇದರಿಂದಾಗಿ ಕೆಲಕಾಲ ಮತದಾನವನ್ನು ತಡೆಹಿಡಿಯಲಾಗಿತ್ತು.

ಹಾವನ್ನು ಹಿಡಿದು ಹೊರಬಿಟ್ಟ ನಂತರ ಮತದಾನ ಪ್ರಕ್ರಿಯೆ ಮುಂದುವರಿಯಿತು.

Snake inside VVPAT machine holds up polling in Kannur, Kerala

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ