ಗುಜರಾತ್ ನ ಅಹಮದಾಬಾದ್ ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತದಾನ

ಅಹ್ಮದಾಬಾದ್ : ಗುಜರಾತಿನ ಅಹ್ಮದಾಬಾದಿನ ನರನ್ ಪುರ ಉಪ ವಲಯ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಅವರ ಪತ್ನಿ ಸೊನಾಲ್ ಶಾ ಮತ ಚಲಾಯಿಸಿದರು.

ಈ ವೇಳೆ ಮಾತನಾಡಿದ ಅಮಿತ್ ಶಾ, ನಿಮ್ಮ ಒಂದು ಮತದಿಂದ ರಾಷ್ಟ್ರದ ಭದ್ರತೆ, ಸದೃಢತೆ, ಅಭಿವೃದ್ಧಿ ಮಾಡಬಹುದಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವಂತೆ ದೇಶಾದ್ಯಂತ ಮತದಾರರ ಬಳಿ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.

ಭವಿಷ್ಯದ ಭಾರತಕ್ಕಾಗಿ ಮತದಾನ ಮಾಡುವಂತೆ ಯುವ ಜನಾಂಗ ಹಾಗೂ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರ ಬಳಿ ಮನವಿ ಮಾಡುವುದಾಗಿ ಅಮಿತ್ ಶಾ ತಿಳಿಸಿದರು.

ರಾಜ್ಯಸಭೆ ಸದಸ್ಯರಾಗಿರುವ ಅಮಿತ್ ಶಾ, ಗಾಂಧಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

lok sabha election-2019,amith shah,vote

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ