ಮೋದಿ ಮತ್ತೆ ಪ್ರಧಾನಿಯಾಗುವುದು ಖಚಿತ-ಮಾಜಿ ಸಂಸದ ಜಿ.ಎಸ್.ಬಸವರಾಜ್

ತುಮಕೂರು,ಏ.22- ಅಮೆರಿಕಾದಿಂದ 50 ಸಾವಿರಕ್ಕೂ ಹೆಚ್ಚು ಭಾರತೀಯರು ತಾಯ್ನಾಡಿಗೆ ಬಂದು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂದು ಬಯಸಿ ಮತದನ ಮಾಡಿ ಹೋಗಿದ್ದಾರೆ. ಇದು ದೇಶದ ಇತಿಹಾಸದಲ್ಲೇ ಪ್ರಥಮ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಹೇಳಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಮೆರಿಕ ಸೇರಿದಂತೆ ಬೇರೆ, ಬೇರೆ ದೇಶಗಳಲ್ಲಿರುವ ಭಾರತೀಯರು ಪ್ರಧಾನಿ ಮೋದಿಯವರನ್ನು ಬೆಂಬಲಿಸಿದ್ದು, ಮೋದಿ ಮತ್ತೆ ಪ್ರಧಾನಿಯಾಗುವುದು ಖಚಿತ ಎಂದು ತಿಳಿಸಿದರು.

ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿಗೆ ಅಭೂತಪೂವ ಬೆಂಬಲ ವ್ಯಕ್ತವಾಗಿದೆ.ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ತುಮಕೂರು ಉಸ್ತುವಾರಿ ವಹಿಸಿದ್ದ ವಿ.ಸೋಮಣ್ಣ, ಹಿರಿಯೂರಿನ ಶಾಸಕಿ ಪೂರ್ಣಿಮಾ ಸೇರಿದಂತೆ ಹಾಲಿ-ಮಾಜಿ ಶಾಸಕರು, ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಬಹಳ ಶ್ರಮಿಸಿದ್ದು ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಅಮೆರಿಕದಲ್ಲಿ ನೆಲೆಸಿರುವ ಸೌರವ್ ಬಾನು ಮಾತನಾಡಿ, ಇಡೀ ವಿಶ್ವವೇ ಭಾರತವನ್ನು ಗುರುತಿಸಿ ಪ್ರೀತಿಸುತ್ತಿವೆ. ಇಷ್ಟು ವರ್ಷಗಳವರೆಗೆ ಇಂತಹ ಕೆಲಸ ಏಕೆ ಆಗಿರಲಿಲ್ಲ ಎಂದು ಪ್ರಶ್ನಿಸಿದರು.

ಇಡೀ ವಿಶ್ವವೇ ಭಾರತದತ್ತನೋಡುತ್ತಿದೆ.ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕಾರಣ. ಐದು ವರ್ಷದಲ್ಲಿ ಅವರ ಸಾಧನೆ ಅನನ್ಯ.ಅದಕ್ಕಾಗಿಯೇ ನಾವೆಲ್ಲ ಅವರನ್ನು ಗೌರವಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹೆಬ್ಬಾಕದ ರವಿ, ಶಿವಪ್ರಸಾದ್, ಹರೀಶ್, ಅರುಣ್‍ಕುಮಾರ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ