ಸಾಲ ಮನ್ನಾ ಕುರಿತು ಸಿಎಂ ಕುಮಾರಸ್ವಾಮಿ ರಾಜ್ಯದ ರೈತರಿಗೆ ಸುಳ್ಳು ಹೇಳಿದ್ದಾರೆ: ಅಮಿತ್ ಶಾ

ದಾವಣಗೆರೆ: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರೈತರ ಸಾಲಗಳನ್ನು ಮನ್ನಾ ಮಾಡಿಲ್ಲ. ರೈತರಿಗೆ ಕೇವಲ ಸುಳ್ಳು ಭರವಸೆಗಳನ್ನು ನೀಡಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ದಾವಣಗೆರೆಯ ಹೊನ್ನಾಳಿ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಮ್. ಸಿದ್ದೇಶ್ ಪರ ಚುನಾವಣಾ ಪ್ರಚಾರ ನಡೆಸಿದ ಅಮಿತ್ ಶಾ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶವನ್ನು ಆಳುವವರು ಯಾರು ಎಂಬ ಆಯ್ಕೆ ನಿಮ್ಮ ಮುಂದಿದೆ. ಅಭಿವೃದ್ಧಿಯ ಮಾನದಂಡ ಹೊಂದಿರುವ ಎನ್​ಡಿಎ ಒಂದೆಡೆಯಾದರೆ, ಮತ್ತೊಂದೆಡೆ ರಾಹುಲ್ ಅಂಡ್ ಟೀಮ್ ಇದೆ. ಯಾರಾಗಬೇಕೆಂದು ನೀವೇ ನಿರ್ಧರಿಸಿ ಎಂದರು.

ಕಳೆದ ಹಲವು ವರ್ಷಗಳಿಂದ ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಬಾಬಾ ರಾಹುಲ್ ಅಂಡ್ ಟೀಮ್ ಅನ್ನು ಪ್ರಶ್ನೆ ಮಾಡುತ್ತಲೇ ಇದ್ಧೇನೆ. ಆದರೆ, ಅವರು ಈವರೆಗೆ ಅದಕ್ಕೆ ಉತ್ತರ ನೀಡಿಲ್ಲ. ಆದರೆ ನಿಮ್ಮ ಪ್ರಧಾನಿ ಯಾರಾಗಬೇಕು ಎಂಬ ಆಯ್ಕೆ ನಿಮ್ಮ ಮುಂದಿದೆ ಅದನ್ನು ನೀವೆ ನಿರ್ಧರಿಸಿ ಎಂದು ಹೇಳಿದರು.

ಕಳೆದ 4 ವರ್ಷಗಳಿಂದ ಇಡೀ ದೇಶ ಸುತ್ತಿ ಇಲ್ಲಿಗೆ ಬಂದಿದ್ದೇನೆ. ನಾನು ಹೋದಲ್ಲೆಲ್ಲ ಮೋದಿ ಮೋದಿ ಎಂಬ ಘೊಷಣೆ ಮೊಳಗುತ್ತಿದೆ. ಮೋದಿ ದೇಶದ ನಾಯಕರು ಆದರೆ, ನಾಯಕರೆ ಇಲ್ಲದವರು ಇಂದು ದೇಶ ಮುನ್ನಡೆಸಲು ಬರುತ್ತಿದ್ದಾರೆ. ಇಂತವರಿಗೆ ಅವಕಾಶ ಮಾಡಿಕೊಡದೆ ಬಿಜೆಪಿಗೆ ಮತ ನೀಡಿ ಎಂದರು.

lok sabha election,davanagere,amith shah

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ