ಜೆಡಿಎಸ್‌ನವರ ಬ್ಲಾಕ್​ಮೇಲ್​ಗೆ ಹೆದರಿ ಸಿದ್ದರಾಮಯ್ಯ ಮಂಡ್ಯದಲ್ಲಿ ಅವರ ಪರ ಪ್ರಚಾರ ಮಾಡಿದ್ದಾರೆ ಅಷ್ಟೇ; ಸುಮಲತಾ ಆರೋಪ

ಬೆಂಗಳೂರು: ಲೋಕಸಭೆ ಚುನಾವಣೆ ಪ್ರಚಾರಕ್ಕೆ ಇನ್ನು ಮೂರು ದಿನ ದಿನ ಬಾಕಿ ಇರುವಂತೆ ಮಂಡ್ಯ ಅಖಾಡದಲ್ಲಿ ಪ್ರಚಾರ ಕಾವು ಇಂದು ಜೋರಾಗಿ ನಡೆದಿದೆ. ಇಂದು ಮಳವಳ್ಳಿಯ ದಳವಾಯಿ ಕೋಡಿಯಲ್ಲಿ ಪ್ರಚಾರ ಮಾಡಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್, ಜಿಲ್ಲೆಯಲ್ಲಿ ಮೋಸದ ರಾಜಕಾರಣ, ಕುತಂತ್ರ ರಾಜಕರಣ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶದ ಸೈನಿಕರ ಬಗ್ಗೆ ಕೇವಲ ವಾಗಿ ಮಾತುಗಳನ್ನು ಹಾಡಿದ್ದಾರೆ. ನಿಮ್ಮ ಊರಿನ ರೈತನ ಮಗಳಾದ ಲಕ್ಷ್ಮಿ ಅಶ್ವಿನ್ ಗೆ ಮೋಸ ಮಾಡಿದ್ದಾರೆ. ಅಲ್ಲಿ ಅಧಿಕಾರ ಕೆಳದುಕೊಂಡು ಇಲ್ಲಿ ರಾಜಕೀಯ ಭವಿಷ್ಯ ಕೂಡ ಕಳೆದುಕೊಂಡಿದ್ದಾರೆ. ಬರೀ ಕುಟುಂಬ ರಾಜಕಾರಣ ಅಷ್ಟೇ. ಮೂವರು ಸಚಿವರು ಮಾಡದ ಅಭಿವೃದ್ಧಿಯನ್ನು ಈಗ ಅವರ ಮಗ ಮಾಡ್ತಾರಂತೆ. ಸ್ವಾರ್ಥ ರಾಜಕಾರಣ ಮಾಡದೆ ಇರೋ ರಾಜಕಾರಣಿ ಅಂದರೆ ಅಂಬರೀಷ್​ ಮಾತ್ರ ಎಂದು ಸುಮಲತಾ ಅವರು ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಡ್ಯಕ್ಕೆ ಸಿದ್ದರಾಮಯ್ಯ  ಅವರನ್ನು ಕಟ್ಟಿ ಹಾಕಿಕೊಂಡು ಕರೆದುಕೊಂಡು ಬಂದಿದ್ದಾರೆ. ಅವರು ಮನಪೂರ್ವಕವಾಗಿ ಒಪ್ಪಿ ಜೆಡಿಎಸ್​ ಪರ ಪ್ರಚಾರಕ್ಕೆ ಬಂದಿಲ್ಲ.

ಜೆಡಿಎಸ್​ನವರ ಬ್ಲಾಕ್ ಮೇಲ್ ತಂತ್ರಕ್ಕೆ ಹೆದರಿ ಸಿದ್ದರಾಮಯ್ಯ ಇಲ್ಲಿಗೆ ಬಂದಿದ್ದಾರೆ.  ಅವರು ಪಕ್ಷೇತರ ಅಭ್ಯರ್ಥಿಗೆ ಮತ ಹಾಕಬೇಡಿ ಎಂದು ಮುಕ್ತ ಮನಸ್ಸಿನಿಂದ ಹೇಳಿಲ್ಲ.  ಬದಲಾಗಿ ಜೆಡಿಎಸ್‌ನವರ ಬ್ಲಾಕ್ ಮೇಲ್ ಗೆ ಹೆದರಿ ಅವರ ಪರ ಪ್ರಚಾರ ಮಾಡ್ತಿದ್ದಾರೆ.  ಮೈಸೂರಲ್ಲಿ ಆಮೇಲೆ ಏನು ಆಗುತ್ತೋ ಎಂಬ ಭಯದಿಂದ ಅವರು ಇವತ್ತು ಇಲ್ಲಿ ಪ್ರಚಾರಕ್ಕೆ ಬಂದಿದ್ದಾರೆ ಅಷ್ಟೇ. ಅವರ ಮನದಾಳದ ಮಾತು ಅಲ್ಲ. ಹೈಕಮಾಂಡ್​ಗೆ ಇವರು ದೂರು ಕೊಟ್ಟು ಸಿದ್ದರಾಮಯ್ಯಗೆ ಒತ್ತಡ ಹಾಕಿ ಕರೆ ತಂದಿದ್ದಾರೆ. ಅವರನ್ನು ಕೈ ಕಟ್ಟಿ ಹಾಕಿ, ಬ್ಲಾಕ್​ಮೇಲ್​ ಮಾಡಿ ಕರೆದುಕೊಂಡು ಬಂದಿದ್ದಾರೆ ಎಂದು ಸುಮಲತಾ ಅಂಬರೀಷ್ ಆರೋಪ ಮಾಡಿದರು.

ಸುಮಲತಾ ಅವರಿಗೆ ಗ್ರಾಮಸ್ಥರು ಶಿವಕುಮಾರ್ ಸ್ವಾಮೀಜಿಗಳ ಭಾವಚಿತ್ರ ಇರುವ ಫೋಟೋ ನೀಡಿ ಶುಭ ಹಾರೈಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ