2ನೇ ಬಾರಿ ಮೋದಿ ಪ್ರಧಾನಿಯಾದರೆ ದೇಶ ನಾಶವಾಗಿ ಹೋಗುತ್ತದೆ: ನವಜೋತ್ ಸಿಂಗ್ ಸಿಧು

ರಾಯ್​ಪುರ : ನರೇಂದ್ರ ಮೋದಿ ಮತ್ತೆ ಪ್ರಧಾನಿ ಪಟ್ಟಕ್ಕೆ ಏರಿದರೆ ಭಾರತದ ಸರ್ವನಾಶವಾಗುತ್ತದೆ ಎಂದು ಪಂಜಾಬ್​ ಸರ್ಕಾರ ಸಚಿವ ನವಜೋತ್​ ಸಿಂಗ್​ ಸಿಧು ವಾಗ್ದಾಳಿ ನಡೆಸಿದ್ದಾರೆ.

ಪ್ರಪಂಚ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ? ನಮ್ಮ ನೆರೆ ರಾಷ್ಟ್ರ ಚೀನಾ ಸಮುದ್ರದ ಅಡಿ ರೈಲ್ವೆ ಹಳಿ ನಿರ್ಮಿಸುತ್ತಿದೆ. ಅಮೆರಿಕ ಮಂಗಳನ ಮೇಲೆ ಮನುಷ್ಯರನ್ನು ಕಳುಹಿಸುವ ಯೋಜನೆ ರೂಪಿಸುತ್ತಿದೆ. ರಷ್ಯಾ ರೋಬಾಟಿಕ್​ ಸೇನೆಯನ್ನು ನಿರ್ಮಿಸುತ್ತಿದೆ. ಆದರೆ, ನೀವು ಚೌಕಿದಾರರನ್ನು ಸೃಷ್ಟಿಸುತ್ತಿದ್ದೀರಿ. ಅದೂ ಕಳ್ಳ ಚೌಕಿದಾರರನ್ನು ಸೃಷ್ಟಿಸುತ್ತಿದ್ದೀರಿ ಎಂದು ಕಿಡಿ ಕಾರಿದ್ದಾರೆ.

ಕಾಂಗ್ರೆಸ್​ ಪಕ್ಷ ನುಡಿದಂತೆ ನಡೆದುಕೊಳ್ಳುತ್ತದೆ. ಕಾಂಗ್ರೆಸ್​ನ ಪಕ್ಷದ ಮಾತು ಮತ್ತು ಕೃತಿಯ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ 11-15 ಲಕ್ಷ ರೂ. ವರೆಗೆ ರೈತರ ಸಾಲವನ್ನು ಮನ್ನಾ ಮಾಡಲಾಗಿದೆ. ಆದರೆ ಪ್ರಧಾನಿ ಮೋದಿ ನೀಡಿದ್ದ ಭರವಸೆಗಳನ್ನೇನೂ ಇಡೇರಿಸಿಲ್ಲ. ಬಿಜೆಪಿಯವರು ಕೇವಲ ಭರವಸೆಗಳನ್ನು ಮಾತ್ರ ನೀಡುತ್ತಾ ಸುಳ್ಳು ಹೇಳುತ್ತಾರೆ ಎಂದು ಸಿಧು ಹೇಳಿದ್ದಾರೆ.

Country will be finished if PM Modi retains power for second term: Navjot Singh Sidhu

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ