ಆಳಂದನಲ್ಲಿ ಡಾ.ಗೀತಾ ಖಂಡ್ರೆ ಮತಯಾಚನೆ

ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಅವರ ಪತ್ನಿ ಡಾ.ಗೀತಾ ಖಂಡ್ರೆ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಮಿಂಚಿನ ಸಂಚಾರ ನಡೆಸಿ ಮತಯಾಚನೆ ಮಾಡಿದರು.

ಆಳಂದ ಪಟ್ಟಣದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಠ ಹಾಗೂ ಪ್ರಸಿದ್ಧ ಶ್ರೀ ಹನುಮಾನ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಚಾರಕ್ಕೆ ಚಾಲನೆ ನೀಡಿದರು.

ವಿವಿಧೆಡೆ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿ, 2014ರ ಚುನಾವಣೆಯಲ್ಲಿ ಬಿಜೆಪಿಗೆ ಆಳಂದ ಕ್ಷೇತ್ರ ಲೀಡ್ ಕೊಟ್ಟಿತು. ಆದರೆ ಸಂಸದ ಭಗವಂತ ಖೂಬಾ ಗೆದ್ದ ನಂತರ ಆಳಂದ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದರು.

ಒಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಇದೀಗ ಮತ್ತೆ ಚುನಾವಣೆ ಬಂದಿರುವ ಕಾರಣ ಇಲ್ಲಿಗೆ ಬರುತ್ತಿರುವ ಖೂಬಾ ಜನರು ತಕ್ಕ ಪಾಠ ಕಲಿಸಬೇಕು. ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬಹುಮತ ನೀಡುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಆಳಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು. ಇಲ್ಲಿನ ಜನರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ಸಮಸ್ಯೆಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಲಾಗುವುದು. ಆಳಂದನ ಮನೆ ಮಗಳಾಗಿ ನಾನು ಕೆಲಸ ಮಾಡಿ ಇಲ್ಲಿನ ಬೇಕು, ಬೇಡಿಕೆಗಳಿಗೆ ಸ್ಪಂದಿಸುವೆ ಎಂದು ಹೇಳಿದರು.

ಪ್ರಮುಖರಾದ  ಆರ್.ಕೆ. ಪಾಟೀಲ್, ಲಿಂಗು, ಸಲಾಮ್ ಸಗ್ರಿ, ರವಿಂದ್ರ ಕೊರಳೆ, ಟಿಬಿ ಚಕ್ರವರ್ತಿ, ಅಮ್ಜದ್ ಅಲಿ, ವಹಿದ್, ಸಂಜಯ್ ನಯಕ್,  ದಿಲೀಪ ಚಇರಸಾಗರ, ಆನಂದ ನಡಗೆ, ಲಿಂಗರಾಜ ಪಾಟೀಲ್, ಸಿದ್ದು, ವೀರಶೆಟ್ಟಿ, ಬಸವರಾಜ ಪವರಶೆಟ್ಟಿ, ವಿಜು ಹತ್ತರಕಿ, ಪಪ್ಪು ಪಾಟೀಲ್ ಖಾನಾಪುರ ಇತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ