ಡಾ.ಗೀತಾ ಖಂಡ್ರೆಗೆ ಆರತಿ ಮಾಡಿ ಸ್ವಾಗತ

ಬೀದರ್: ಕ್ಷೇತ್ರದ ಮೈತ್ರಿ ಪಕ್ಷಗಳ ಅಭ್ಯರ್ಥಿ ಈಶ್ವರ ಖಂಡ್ರೆ ಗೆಲುವಿಗಾಗಿ ಪತ್ನಿ ಡಾ. ಗೀತಾ ಅವರು ಬುಧವಾರ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಪ್ರಚಾರ ನಡೆಸಿದರು. ನೂರಾರು ಕಾರ್ಯಕರ್ತರೊಂದಿಗೆ ಪ್ರತಾಪನಗರ, ನೌಬಾದ್, ಆಟೋ ನಗರ, ಮಹಾದೇವ ನಗರ, ಹೌಸಿಂಗ್ ಬೋರ್ಡ್, ರಾಮಚಂದ್ರ ನಗರ ಸೇರಿ ವಿವಿಧೆಡೆ ಪಾದಯಾತ್ರೆ ನಡೆಸಿ ಪತಿಯ ಪರವಾಗಿ ಮತಯಾಚಿಸಿದರು.

ವಿವಿಧ ಬಡಾವಣೆಗಳಿಗೆ ತೆರಳಿದ್ದಾಗ ಡಾ. ಗೀಡಾ ಖಂಡ್ರೆ ಅವರಿಗೆ ಸ್ಥಳೀಯರು ಕುಂಕುಮ ಹಚ್ಚಿ, ಆರತಿ ಮಾಡುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದು ಕಂಡುಬಂತು. ಭಾಲ್ಕಿ ಜತೆಯಲ್ಲಿ ಬೀದರ್ ಜನರೊಂದಿಗೆ ನಮ್ಮ ಕುಟುಂಬ ಭಾವನಾತ್ಮಕ ಸಂಬಂಧ ಹೊಂದಿದೆ.

ನಗರ ಜನಜೀವನ ಸುಧಾರಣೆಗೆ ಈಶ್ವರ ಖಂಡ್ರೆ ಕಾಳಜಿ ಹೊಂದಿದ್ದಾರೆ. ಭಾಲ್ಕಿ ಮತ್ತು ಬೀದರ್ ಜನರ ಮಧ್ಯೆ ಖಂಡ್ರೆಯವರಿಗೆ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ನಿಮ್ಮ ಮನೆ ಮಗನೆಂದು ತಿಳಿದು ಆಶೀರ್ವದಿಸಿ ಗೆಲ್ಲಿಸಬೇಕು ಎಂದು ಡಾ. ಗೀತಾ ಮನವಿ ಮಾಡಿದರು.

ಖಂಡ್ರೆಯವರು ಎಲ್ಲೇ ಇದ್ದರೂ, ನಿಮ್ಮ ಯಾವುದೇ ಸಮಸ್ಯೆಗೆ ನಾನು ಪರಿಹರಿಸಲು ಪ್ರಯತ್ನಿಸುವೆ. ನಿಮ್ಮ ಕಷ್ಟ-ಸುಖದ ಚಿಂತೆ ನನಗೆ ಬಿಡಿ. ನಾನು ಸದಾ ನಿಮ್ಮೊಂದಿಗಿz್ದÉೀನೆ. ಖಂಡ್ರೆಯವರನ್ನು ಗೆಲ್ಲಿಸಿದರೆ ನಿಮ್ಮ ಋಣ ತೀರಿಸುವ ಬದ್ಧತೆ ನಮ್ಮಲ್ಲಿದೆ ಎಂದರು.
ಪಪ್ಪು ಪಾಟೀಲ್ ಖಾನಾಪುರ, ಮಹಾಂತಯ್ಯ ಸ್ವಾಮಿ ಇತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ