ಕ್ಷೇತ್ರದ ಅಭಿವೃದ್ಧಿಗೆ ಸಂಸದ ಡಿ.ಕೆ.ಸುರೇಶ್ ಕೊಡುಗೆ ಶೂನ್ಯ-ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ

ಆನೇಕಲ್,ಏ.8 – ಕನಕಪುರದ ಬಂಡೆ ಈಗಾಗಲೇ ಛಿದ್ರ-ಛಿದ್ರವಾಗಿ ಹೊಡೆಯಲು ಪ್ರಾರಂಭವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ ಡಿ.ಕೆ.ಶಿವಕುಮಾರ್ ರವರಿಗೆ ಟಾಂಗ್ ನೀಡಿದರು.

ಸೂರ್ಯನಗರದಲ್ಲಿ ನೂತನವಾಗಿ ಪ್ರಾರಂಭಿಸಿರುವ ಬಿಜೆಪಿ ಕಚೇರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದ ಜನರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೇ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ಪಲಾಯನ ಮಾಡುತ್ತಿದ್ದಾರೆ ಎಂದರು.

ರಾಮಲಿಂಗಾರೆಡ್ಡಿ ರವರಿಗೆ ಮಂತ್ರಿ ಸ್ಥಾನವನ್ನು ತಪ್ಪಿಸಿದ್ದು ಇದೇ ಡಿ.ಕೆ. ಶಿವಕುಮಾರ್ ಈಗ ಮತ ಪಡೆಯುವ ಉದ್ದೇಶದಿಂದ ಕ್ಷೇತ್ರದಲ್ಲಿ ರಾಮಲಿಂಗಾರೆಡ್ಡಿರವರ ಮೂಲಕ ಪ್ರಚಾರ ಮಾಡುತ್ತಿರುವುದು ದುರಂತ ಎಂದು ವ್ಯಂಗ್ಯವಾಡಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭಿವೃದ್ದಿಗೆ ಪ್ರಧಾನಿ ಮೋದಿರವರು ಸಾಕಷ್ಠು ಅನುಧಾನ ನೀಡಿದ್ದು ಸಂಸದ ಡಿ.ಕೆ.ಸುರೇಶ್ ತಮ್ಮ ಕಾಂಗ್ರೆಸ್ ಪಕ್ಷದ ಅನುಧಾನ ಎಂದು ಬಿಂಬಿಸಿಕೊಂಡಿದ್ದಾರೆ ಹೊರತು ಕ್ಷೇತ್ರದ ಅಭಿವೃದ್ದಿಗೆ ಅವರ ಕೊಡುಗೆ ಶೂನ್ಯ ಎಂದರು.

ಜಿಪಂ ಅಧ್ಯಕ್ಷ ಸಿ.ಮುನಿರಾಜು, ಬಮೂಲ್ ಅಧ್ಯಕ್ಷ ಬಿಜೆ ಆಂಜಿನಪ್ಪ, ಬಿಜೆಪಿಯ ಸರ್ಜಾಪುರ ರಾಘವೇಂದ್ರ, ಬಂಡಾಪುರ ರಾಮಚಂದ್ರ, ಗುಡ್ಡಹಟ್ಟಿ ನಾಗೇಶ್ ರೆಡ್ಡಿ, ಪವಿತ್ರ ಜಯಪ್ರಕಾಶ್, ವಾತ್ಸಲ್ಯ ಲಷ್ಮೀನಾರಾಯಣ, ಮುನಿರತ್ನಮ್ಮ ನಾರಾಯಣಪ್ಪ, ಕೆ.ಸಿ. ರಾಮಚಂದ್ರ, ಹುಲ್ಲಳ್ಳಿ ಶ್ರೀನಿವಾಸ್, ಕೆ.ವಿ. ಕೇಶವರೆಡ್ಡಿ ಮತ್ತಿತರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ