ವೀರಪ್ಪ ಮೊಯ್ಲಿಯವರಿಂದ ಬಲಿಜ ಜನಾಂಗಕ್ಕೆ ಅನ್ಯಾಯ-ಬಲಿಜ ಸಮುದಾಯ ಮುಖಂಡ ಸಿ.ಮುನಿರಾಜು

ಆನೇಕಲ್,ಏ.8- ಸಂಸದ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ 2ಎ ಪಂಗಡಕ್ಕೆ ಸೇರಿದ್ದ ಬಲಿಜ ಸಮುದಾಯವನ್ನು 3ಎಗೆ ಮಾರ್ಪಡಿಸಿ ನಮ್ಮ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಸಮುದಾಯದ ಮುಖಂಡ ಸಿ.ಮುನಿರಾಜು ಆರೋಪಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಲಿಜ ಸಮುದಾಯ ಮೊದಲು 2ಎ ಪಂಗಡಕ್ಕೆ ಸೇರಿದ್ದು, ಬಲಿಜ ಸಮುದಾಯದ ಏಳ್ಗೆ ಸಹಿಸದ ವೀರಮೊಯ್ಲಿರವರು 1993ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ 2ಎ ದಿಂದ 3ಎಗೆ ಮಾರ್ಪಾಡು ಮಾಡಿ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ. ಜನತೆ ಇವರನ್ನು ಬೆಂಬಲಿಸಬಾರದು ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು ಮೂರೂವರೆ ಲಕ್ಷಕ್ಕೂ ಹೆಚ್ಚು ಬಲಿಜ ಸಮುದಾಯದ ಮತದಾರಿದ್ದರೂ ಸಹ ವೀರಪ್ಪ ಮೊಯ್ಲಿರವರು ಬಲಿಜ ಸಮುದಾಯದ ಅಭಿವೃದ್ದಿಗೆ ಒಂದು ಬಿಡುಗಾಸು ನೀಡಿಲ್ಲಈ ಬಾರಿ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡರಿಗೆ ಮತ ಹಾಕುವ ಮುಖೇನ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಯಡಿಯೂರಪ್ಪರವರು ರಾಜ್ಯದ ಮುಖ್ಯ ಮಂತ್ರಿಗಳು ಆಗಿದ್ದ ಸಂಧರ್ಭದಲ್ಲಿ ನಮ್ಮ ಬಲಿಜ ಜನಾಂಗಕ್ಕೆ 2 ಏ ಮೀಸಲಾತಿ ನೀಡಿದ್ದು ಮತ್ತೇ ಅವರೇ ಈ ರಾಜ್ಯದ ಮುಖ್ಯ ಮಂತ್ರಿಯಾದಾಗ ಮಾತ್ರ ನಮ್ಮ ಜನಾಂಗ ಅಭಿವೃದ್ದಿ ಸಾಧ್ಯ ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಲಿಜ ಜನಾಂಗದವರು ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ