ಕಾಂಗ್ರೇಸ್ ಸಭೆಯಲ್ಲಿ ಕೈ-ಕೈ ಮಿಲಾಯಿಸಿದ ಎರಡು ಗುಂಪುಗಳು

ಕೋಲಾರ, ಏ.7-ಅಲ್ಪಸಂಖ್ಯಾತ ಕಾಂಗ್ರೆಸ್ ಸಭೆಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿಯೇ ಕಾಂಗ್ರೆಸ್‍ನ ಎರಡು ಗುಂಪುಗಳು ಕೈ-ಕೈ ಮಿಲಾಯಿಸಿದ ಘಟನೆ ನಡೆಯಿತು.

ಕಳೆದ ರಾತ್ರಿ ನಗರದ ಕನ್‍ವೆನ್ಷನ್ ಹಾಲ್‍ವೊಂದರಲ್ಲಿ ಕೆ.ಎಚ್.ಮುನಿಯಪ್ಪ ಪರ ಪ್ರಚಾರ ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ನಜೀರ್ ಅಹಮ್ಮದ್ ಬೆಂಬಲಿಗರ ಗುಂಪೊಂದು ಏಕಾಏಕಿ ಸಭಾಂಗಣಕ್ಕೆ ನುಗ್ಗಿ ಕಾಂಗ್ರೆಸ್ ಮತ್ತು ರಾಹುಲ್‍ಗಾಂಧಿ ಅವರಿಗೆ ಜೈಕಾರ ಹಾಕಿ ಹಾಲಿ ಸಂಸದ, ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರ ವಿರುದ್ಧ ಧಿಕ್ಕಾರ ಕೂಗಿದರು.

ಈ ವೇಳೆ ಎರಡೂ ಗುಂಪುಗಳವರು ಕೈ ಕೈ ಮಿಲಾಯಿಸಿದ್ದು, ಗಲಾಟೆ ಗದ್ದಲಕ್ಕೆ ಕಾರಣವಾಯಿತು.

ಪೊಲೀಸರು ಮಧ್ಯಪ್ರವೇಶಿಸಿ ನಜೀರ್ ಅಹಮದ್ ಬೆಂಬಲಿಗರನ್ನು ಹೊರಕ್ಕೆ ಕಳುಹಿಸಿದರು.

ಆನಂತರ ಸಿ.ಎಂ.ಇಬ್ರಾಹಿಂ ಅವರು ಸಭೆಯಲ್ಲಿ ಮಾತನಾಡುತ್ತಾ, ದೇಶದಲ್ಲೆಲ್ಲಾ ಕಾಂಗ್ರೆಸ್ ಅಲೆ ಎದ್ದಿದೆ.ಎಲ್ಲಾ ಕಡೆ ಮುಸ್ಲಿಂ ಬಾಂಧವರು, ಅಲ್ಪಸಂಖ್ಯಾತರು, ಕಾಂಗ್ರೆಸ್ ಪರ ಸದ್ದು, ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಅವರಿಗೆ ಬೆಂಬಲ ವ್ಯಕ್ತವಾಗಿದೆ.ಇವರ ಗೆಲುವು ನಿಶ್ಚಿತ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ