ಬಿಜೆಪಿ ಚಿಹ್ನೆಯ ಶಾಲು ಬಳಸಲು ಸಿಬ್ಬಂದಿ ಅಡ್ಡಿ-ಗರಂ ಆದ ಶಾಸಕ ಪ್ರೀತಮ್‍ಗೌಡ

ಹಾಸನ, ಏ.7-ಪ್ರಚಾರದ ವೇಳೆ ಬಿಜೆಪಿ ಚಿಹ್ನೆಯ ಶಾಲು ಬಳಸಲು ಚುನಾವಣಾ ಸಿಬ್ಬಂದಿ ಅಡ್ಡಿಪಡಿಸಿದುದಕ್ಕೆ ಶಾಸಕ ಪ್ರೀತಮ್‍ಗೌಡ ಗರಂ ಆದರು.

ರಾಜಘಟ್ಟದಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಪ್ರಚಾರದಲ್ಲಿ ತೊಡಗಿದ್ದಾಗ ಪಕ್ಷದ ಚಿಹ್ನೆಯ ಶಾಲು ಬಳಸಲು ಪ್ರೀತಮ್‍ಗೌಡ ಮತ್ತಿತರರು ಮುಂದಾದರು.

ಇದಕ್ಕೆ ಚುನಾವಣೆ ಸಿಬ್ಬಂದಿ ಅವಕಾಶ ನೀಡಲಿಲ್ಲ. ಶಾಲು ಹಾಕಿ ಪ್ರಚಾರ ಮಾಡುವಂತಿಲ್ಲ ಎಂದು ಸೂಚಿಸಿದರು. ನಮಗೆ ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ ಅದಕ್ಕೆ ಪಕ್ಷದ ಶಾಲು ಹಾಕಿ ಪ್ರಚಾರಕ್ಕೆ ಅವಕಾಶ ಕೊಟ್ಟಿಲ್ಲ ಸಿಬ್ಬಂದಿ ಎಂದು ಹೇಳಿದರು.

ಇದರಿಂದ ಗರಂ ಆದ ಪ್ರೀತಮ್‍ಗೌಡ ಯಾರ್ರಿ ನಿಮಗೆ ಹೀಗೆ ಹೇಳಿದ್ದು ಎಂದು ಸಿಬ್ಬಂದಿಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿ ತಕ್ಷಣ ಜಿಲ್ಲಾಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಮಾತನಾಡಿದರು.

ಜಿಲ್ಲಾಧಿಕಾರಿ ಸೂಚನೆ ಬಳಿಕ ಪ್ರಚಾರಕ್ಕೆ ಅವಕಾಶ ಕೊಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ