ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ-15 ಪ್ರಕರಣ ದಾಖಲು

ಚಿಕ್ಕಮಗಳೂರು,ಮಾ.28-ಚುನಾವಣಾ ನೀತಿ ಸಂಹಿತೆ, ಉಲ್ಲಂಘನೆ ಸಂಬಂಧಿಸಿದಂತೆ ಸಿ ವಿಷಲ್ ಆ್ಯಪ್‍ನಲ್ಲಿ ಈವರೆಗೆ 15 ಪ್ರಕರಣಗಳು ದಾಖಲಾಗಿದೆ.
ಏಳು ಪ್ರಕರಣ ಇತ್ಯರ್ಥಪಡಿಸಿ 8 ಪ್ರಕರಣ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಪ್ರಗತಿಯಲ್ಲಿದೆ.

ಚಿಕ್ಕಮಗಳೂರು-ಉಡುಪಿಯಲ್ಲಿ 14 ಮಂದಿ, ಹಾಸನದಲ್ಲಿ 11 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಈಗಲೇ ನಮ್ಮ ಜಿಲ್ಲೆಗೆ ಒಳಪಡುವ ಶೃಂಗೇರಿ ಮೂಡಿಗೆರೆ ಚಿಕ್ಕಮಗಳೂರು ತರೀಕೆರೆ ಹಾಗೂ ಕಡರೂರು ಎಲ್ಲ ಕ್ಷೇತ್ರಗಳ ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್ ಇವುಗಳ ಅಂಕಿ ಅಂಶಗಳನ್ನು ಸಿದ್ದಪಡಿಸಿ ಕಾಯ್ದಿರಿಸಲಾಗಿದೆ.

ಜಿಲ್ಲೆಯಲ್ಲಿ 9144 ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳಿದ್ದು 8858 ಜಮೆಯಾಗಿವೆ. 233 ಪರವಾನಗಿದಾರರಿಗೆ ಶಸಸ್ತ್ರ ಇಟ್ಟುಕೊಳ್ಳಲು ಅನುಮತಿ ನೀಡಲಾಗಿದೆ.ಉಳಿದ ಬಾಕಿ 53 ಜಮೆ ಮಾಡಿಕೊಳ್ಳಲಾಗುವುದು ಎಂದರು.

ಬ್ಯಾಂಖ್ ಅಧಿಕಾರಿಗಳೊಂದಿಗೆ ಸಭೆ ಮಾಡಲಾಗಿದೆ.ಕಾಫಿ ಬೆಳೆಗಾರರಿಗೆ ಬಟವಾಡಿ ಮಾಡಲು ಹಣವನ್ನು ಬ್ಯಾಂಕ್‍ನಿಂದ ತೆಗೆದುಕೊಂಡು ಹೋದಲ್ಲಿ ಅಂಥವರ ಬಗ್ಗೆ ಕ್ರಮ ಕೈಗೊಳ್ಳುವುದಿಲ್ಲ. ಈ ಹಿಂದಿನ ತಿಂಗಳಿನಲ್ಲೂ ವ್ಯವಹಾರ ನಡೆಸಿರಬೇಕು.

ಉಳಿದಂತೆ ಅಭ್ಯರ್ಥಿಯ ಸಂಬಂಧಿಕರ ಖಾತೆಗಳಿಂದ ಒಮ್ಮೆಲೆ ಒಂದು ಲಕ್ಷಕ್ಕಿಂತ ಹೆಚ್ಚು ವರ್ಗಾವಣೆ ಮಾಡುವುದು ಖಾತೆಯಿಂದ ಖಾತೆಗೆ ವರ್ಗಾಯಿಸಿದ್ದಲ್ಲಿ ಪ್ರತಿ ದಿನ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.ಈ ಬಾರಿಯ ಜಿಲ್ಲೆಯ 20 ಸಖಿ ಮತಗಟ್ಟೆಗಳಲ್ಲಿ ಸ್ಥಾಪಿಸಲಾಗುತ್ತಿದೆ.

ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ 9,26,035 ಮತದಾರರಿದ್ದಾರೆ. ಉಡುಪಿ ಸೇರಿ 14,94,444 ಮತದಾರರಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ 16,29,587 ಮತದಾರರಿದ್ದಾರೆ ಎಂದು ಉಪಸ್ಥಿತರಿದ್ದರು.

ಜಿಲ್ಲಾ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ