ಪತಿಯ ಆತ್ಮಹತ್ಯೆಗೆ ಕಾರಣವಾದ ಪತ್ನಿಯನ್ನು ಬಂಧಿಸಿದ ಪೊಲೀಸರು

ಕೊಳ್ಳೇಗಾಲ, ಮಾ.26- ಪತಿಯ ಆತ್ಮಹತ್ಯೆಗೆ ಕಾರಣಳಾಗಿದ್ದ ಪತ್ನಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ತಿಮ್ಮರಾಜಿಪುರ ಗ್ರಾಮದ ಕೆಂಪನಿಂಗೇಗೌಡನ ಪತ್ನಿ ರಾಜೇಶ್ವರಿ ಬಂಧಿತ ಆರೋಪಿ.

ಈಕೆಯ ಅನೈತಿಕ ಸಂಬಂಧ ಹಾಗೂ 3 ಲಕ್ಷ ರೂ. ಕೊಡದಿದ್ದರೆ ನಿಮ್ಮನ್ನು ಬೀದಿಪಾಲು ಮಾಡಿ ಹೋಗುತ್ತೇನೆ ಎಂದು ತನ್ನ ಗಂಡನಿಗೆ ರಾಜೇಶ್ವರಿ ಹಾಕಿದ್ದ ಬೆದರಿಕೆಯಿಂದ ನೊಂದ ಪತಿ ಕೆಂಪನಿಂಗೇಗೌಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು.

ಈಕೆಗೆ ಕೆಂಪನಪಾಳ್ಯದ ಲಿಂಗರಾಜ್ ಉರುಫ್ ಗುಪ್ತ ಎಂಬಾತನೊಂದಿಗೆ ಅನೈತಿಕ ಸಂಬಂಧವಿತ್ತಲ್ಲದೆ ಕಳೆದ ನಾಲ್ಕು ತಿಂಗಳ ಹಿಂದೆ ಪ್ರಿಯಕರನೊಂದಿಗೆ ಓಡಿ ಹೋಗಿದ್ದರು.

ಮತ್ತೆ ಗ್ರಾಮಕ್ಕೆ ಹಿಂದಿರುಗಿ ಬಂದು ಗಂಡನಿಗೆ 3 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದಳು. ಜನತೆ ಹೀನಾಯವಾಗಿ ನಿಂದಿಸದ್ದರಿಂದ ಜಿಗುಪ್ಸೆಗೊಂಡು ಪತಿ ಆತ್ಮಹತ್ಯೆಗೆ ಶರಣಾಗಿದ್ದ.

ಈ ಸಂಬಂಧ ಮಗ ರವಿ ತಾಯಿ ವಿರುದ್ಧ ದೂರು ನೀಡಿದ್ದರು.ಪೊಲೀಸರು ಆಕೆಯನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಆಕೆಯ ಪ್ರೇಮಿ ತಲೆಮರೆಸಿಕೊಂಡಿದ್ದಾನೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ