ಕೌಟುಂಬಿಕ ಕಲಹ ನೇಣಿಗೆ ಶರಣಾದ ವ್ಯಕ್ತಿ

ಕೊಳ್ಳೇಗಾಲ, ಮಾ.25- ಕೌಟುಂಬಿಕ ಕಲಹದ ಹಿನ್ನೆಲೆ ಯಲ್ಲಿ ವ್ಯಕ್ತಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ತಿಮ್ಮರಾಜಿಪುರ ಗ್ರಾಮದಲ್ಲಿ ಜರುಗಿದೆ.

ಗ್ರಾಮದ ಕೆಂಪನಿಂಗೇಗೌಡ (48) ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ.

ಕೆಂಪನಿಂಗೇಗೌಡ-ರಾಜೇಶ್ವರಿ ದಂಪತಿಗೆ ರಘು ಹಾಗೂ ರವಿ ಎಂಬ ಇಬ್ಬರು ಮಕ್ಕಳಿದ್ದಾರೆ. ತಂದೆ ಹಾಗೂ ಮಕ್ಕಳು ದುಡಿದು ಹಾಗೂ ಸಾಲ ಸೋಲ ಮಾಡಿ ಗ್ರಾಮದಲ್ಲಿ ಇತ್ತೀಚೆಗೆ ಮನೆಯೊಂದನ್ನು ಕಟ್ಟಿಸಿದ್ದರು. ಆದರೆ ಪತ್ನಿ ರಾಜೇಶ್ವರಿಗೆ ಕೆಂಪನಪಾಳ್ಯ ಗ್ರಾಮದ ಲಿಂಗರಾಜು ಎಂಬಾತನೊಡನೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದ್ದು, ಈ ವಿಚಾರ ತಿಳಿದ ತಂದೆ ಮಕ್ಕಳು ಬುದ್ಧಿವಾದ ಹೇಳಿದ್ದಾರೆ.

ಆದರೆ ಗಂಡ ಮಕ್ಕಳ ಮಾತಿಗೆ ಸೊಪ್ಪು ಹಾಕದ ರಾಜೇಶ್ವರಿ ಆತನೊಡನೆ 4 ತಿಂಗಳ ಹಿಂದೆ ಓಡಿ ಹೋಗಿದ್ದಳು. ಇದೇ 18 ರಂದು ಮನೆಗೆ ವಾಪಸ್ ಬಂದ ರಾಜೇಶ್ವರಿಯನ್ನು ಮತ್ತೆ ಯಾಕೆ ಬಂದೆ ಎಂದು ಕೇಳಿದ್ದಕ್ಕೆ 3ಲಕ್ಷ ರೂ, ಕೊಡಿ ಹೋಗುತ್ತೇನೆ ಎಂದು ದಬಾಯಿಸಿದ್ದಾಳೆ. ಮಧ್ಯಾಹ್ನ ಗಂಡನ ಜೊತೆ ಜಗಳ ತೆಗೆದು ತುಂಬ ಹೀನಾಯವಾಗಿ ಬೈದಿದ್ದಾಳೆ, ಇದರಿಂದ ಜಿಗುಪ್ಸೆಗೊಂಡ ಪತಿ ಕೆಂಪನಿಂಗೆಗೌಡ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಈ ಸಂಬಂದ ಮೃತನ ಮಗ ರವಿ ತಾಯಿ ರಾಜೇಶ್ವರಿ ಹಾಗೂ ಆಕೆಯ ಪ್ರೇಮಿ ಲಿಂಗರಾಜು ವಿರುದ್ಧ ನೀಡಿರುವ ದೂರಿನ ಮೇರೆಗೆ ಇಲ್ಲಿನ ಗ್ರಾಮಾಂತರ ಠಾಣೆ ಪೊಲಿಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ