ಮೂವರು ಸಹೋದ್ಯೋಗಿಗಳನ್ನು ಗುಂಡಿಟ್ಟು ಹತ್ಯೆಗೈದ ಸಿಆರ್ ಪಿಎಫ್ ಯೋಧ

ಶ್ರೀನಗರ: ಸಿಆರ್ ಪಿಎಫ್ ಯೋಧನೊಬ್ಬ ತನ್ನ ಮೂವರು ಸಹೋದ್ಯೋಗಿಗಳಿಗೆ ಗುಂಡಿಟ್ತು ಹತ್ಯೆಗೈದು, ತಾನೂ ಶೂಟ್ ಮಾಡಿಕೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಉಧಾಮ್ ಪುರ ಕ್ಯಾಂಪ್ ನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಸಿಆರ್‌ಪಿಎಫ್‌ ಯೋಧನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಆರ್‌ಪಿಎಫ್‌ ಮತ್ತು ಪೊಲೀಸ್‌ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶೂಟೌಟ್ ನಲ್ಲಿ ಮೂವರು ಯೋಧರು ಮೃತಪಟ್ಟಿದ್ದಾರೆ. ಶೂಟ್‌ ಮಾಡಿಕೊಂಡ ಯೋಧ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಸಿಆರ್‌ಪಿಎಫ್‌ 187th ಬೆಟಾಲಿಯನ್‌ನ ಕಮಾಂಡೆಂಟ್‌ ಹರಿಂದರ್‌ ಸಿಂಗ್‌ ತಿಳಿಸಿದ್ದಾರೆ.

ಮೃತರನ್ನು ರಾಜಸ್ಥಾನದ ಜುಂಜುನುವಿನ ಪೊಕರ್ಮಾಲ್‌ ಆರ್‌, ದೆಹಲಿಯ ಯೋಗೇಂದ್ರ ಶರ್ಮಾ ಮತ್ತು ಹರಿಯಾಣದ ನಿವಾಸಿ ಉಮೇದ್‌ ಸಿಂಗ್‌ ಎಂದು ತಿಳಿದುಬಂದಿದೆ.

ಸಹೋದ್ಯೋಗಿಗಳೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ರಾತ್ರಿ 10 ಗಂಟೆ ವೇಳೆಗೆ ಕಾನ್ಪುರದವನಾದ ಪೇದೆ ಅಜಿತ್‌ ಕುಮಾರ್‌ ಎಂಬಾತ ತನ್ನ ಸರ್ವಿಸ್‌ ರೈಫಲ್‌ನಿಂದ ಶೂಟ್‌ ಮಾಡಿದ್ದಾನೆ ಎಂದು ಕ್ಯಾಂಪ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

CRPF Jawan Kills 3 Colleagues Before Shooting Self In Jammu And Kashmir

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ