ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ-ಸಂಸದ ಆರ್.ಧ್ರುವನಾರಾಯಣ್

ಕೊಳ್ಳೇಗಾಲ, ಮಾ.20- ಯಾರು ಏನೇ ಟೀಕೆ ಮಾಡಿದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.10 ವರ್ಷದಲ್ಲಿ ನಾನು ಮಾಡಿರುವ ಕೆಲಸ ನನ್ನ ಕೈ ಹಿಡಿಯುತ್ತದೆ. ನಾನು ಈ ಬಾರಿ ಬಹುಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳುವ ಮೂಲಕ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿಗೆ ಸಂಸದ ಆರ್.ಧೃವನಾರಾಯಣ್ ಟಾಂಗ್ ನೀಡಿದ್ದಾರೆ.

ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಶಾಸಕರುಗಳ ಸಾಧನೆಯನ್ನು ತಮ್ಮ ಸಾಧನೆ ಎಂದು ಹೇಳಿ ಕೊಳ್ಳುತ್ತಿರುವ ಸಂಸದ ಆರ್.ಧೃವನಾರಾಯಣ್ ಗಿಲಿಟ್ ರಾಜಕಾರಣ ಮಾಡುತ್ತಾ ಜನರಿಗೆ ವಂಚಿಸುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಧೃವನಾರಾಯಣ್‍ರವರಿಗೆ ರಾಜಕೀಯ ಶಕ್ತಿ ತುಂಬಿದ ಹಾಗೂ ಪ್ರೇರಣೆಯಾದ ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಈ ಭಾರಿ ಎದುರಾಳಿಯಾಗಲಿದ್ದಾರೆ. ಎಂದು ಹೇಳುವ ಮೂಲಕ ಆರ್.ಧೃವನಾರಾಯಣ್‍ಗೆ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ರಾಜಕೀಯ ಗುರುಗಳು ಎಂದು ಬಿಂಬಿಸಿದ್ದರು.

ಹನೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಪಟ್ಟಣದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಧೃವನಾರಾಯಣ್, ನಂಜುಂಡಸ್ವಾಮಿ ಹತಾಶರಾಗಿ ಮಾತನಾಡುತ್ತಿದ್ದಾರೆ.ನನಗೆ ಬಿಜೆಪಿ ನಾಯಕರಿಂದ ಸರ್ಟಿಫಿಕೇಟ್ ಬೇಕಿಲ್ಲ. ದೊಡ್ಡ ನಾಯಕರಾದ ನಂಜುಂಡಸ್ವಾಮಿ ಸಲಹೆ ನಮಗೆ ಅಗತ್ಯವಿಲ್ಲ ಎಂದು ಕಿಡಿಕಾರಿದರು.

ಬಿಜೆಪಿಯವರು ಇರುವುದೇ ಟೀಕೆ ಮಾಡಲಿಕ್ಕೆ.ಆದ್ದರಿಂದ ಯಾರು ಏನೇ ಟೀಕೆ ಮಾಡಿದರೂ ಅದರ ಬಗ್ಗೆ ತಲೆ ಕೆಡಿಸಿ ಕೊಳ್ಳುವುದಿಲ್ಲ.10 ವರ್ಷದಲ್ಲಿ ನಾನು ಮಾಡಿರುವ ಕೆಲಸ ನನ್ನ ಕೈ ಹಿಡಿಯುತ್ತದೆ.ನಾನು ಈ ಬಾರಿ ಬಹುಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.

ಶ್ರೀನಿವಾಸ್ ಪ್ರಸಾದ್‍ಗೆ ನಾನು ಶಿಷ್ಯನಲ್ಲ ನನಗೆ ಅವರು ಗುರುವಲ್ಲ. ನನ್ನ ರಾಜಕೀಯ ಗುರುಗಳು ದಿ.ರಾಜಶೇಖರ ಮೂರ್ತಿಯವರು. ಹಾಗಾಗಿ ನಾನು ಶ್ರೀನಿವಾಸ್ ಪ್ರಸಾದ್ ಗುರು-ಶಿಷ್ಯರಾಗಲು ಸಾಧ್ಯವಿಲ್ಲ ಎಂದು ನಂಜುಂಡಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಶಾಸಕರಾದ ಡಾ.ಯತೀಂದ್ರ, ಧಮ9 ಸೇನ, ಆರ್.ನರೇಂದ್ರ, ಮಾಜಿ ಶಾಸಕ ಎ.ಆರ್.ಕೃಷ್ಣ ಮೂರ್ತಿ, ಜಿಲ್ಲಾ ಕಾಂಗ್ರೆಸï ಅಧ್ಯಕ್ಷ ಮರಿಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ