ಹೊಸೂರು ಹುಂಡಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

ಮೈಸೂರು, ಮಾ.20-ಲೋಕಸಭಾ ಚುನಾವಣೆಯಲ್ಲಿ ನಾವು ಮತದಾನ ಮಾಡುವುದಿಲ್ಲ ಎಂದು ಹೊಸೂರು ಹುಂಡಿ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

ಜಿಲ್ಲೆಯ ಟಿ.ನರಸೀಪುರ ಗ್ರಾಮವು ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಒಳಪಟ್ಟಿದೆ. ಹೊಸೂರು ಹುಂಡಿ ಗ್ರಾಮದಲ್ಲಿ ಮತಗಟ್ಟೆಯಿಲ್ಲ. ನಮ್ಮ ಗ್ರಾಮದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಮತಗಟ್ಟೆ ಇರುವುದರಿಂದ ಅಲ್ಲಿಗೆ ಹೋಗಿ ಮತದಾನ ಮಾಡಲು ಸಾಧ್ಯವಿಲ್ಲ.

ನಮ್ಮ ಗ್ರಾಮದಲ್ಲೇ ಒಂದು ಸಾವಿರಕ್ಕೂ ಹೆಚ್ಚು ಮಂದಿ ಮತದಾರರಿದ್ದಾರೆ. ಹಾಗಿದ್ದಾಗಿಯೂ ಸಹ ಮತಗಟ್ಟೆ ತೆಗೆಯದೆ ಇರುವುದರಿಂದ ಒಂದು ಕಿಲೋ ಮೀಟರ್ ದೂರು ವೃದ್ಧರು ಹೋಗಿ ಮತ ಚಲಾಯಿಸುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ನಮಗೆ ಗ್ರಾಮದಲ್ಲಿ ಮತಗಟ್ಟೆ ನಿರ್ಮಿಸದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ