ಸ್ಕೂಟಿಗೆ ಟಿಪ್ಪರ್ ವಾಹನ ಡಿಕ್ಕಿ-ಘಟನೆಯಲ್ಲಿ ಪತ್ನಿಯ ಸಾವು

ಚಿಕ್ಕಮಗಳೂರು,ಮಾ.16- ದಂಪತಿ ಹೋಗುತ್ತಿದ್ದ ಸ್ಕೂಟಿಗೆ ವೇಗವಾಗಿ ಬಂದ ಟಿಪ್ಪರ್‍ವಾಹನ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಸಾವನ್ನಪ್ಪಿ, ಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ರಾಮನಹಳ್ಳಿ ನಿವಾಸಿ, ನಿವೃತ್ತ ಎಎಸ್‍ಐ ಕದ್ರಪ್ಪ ಅವರ ಪತ್ನಿ ಲಕ್ಷ್ಮಿ(55) ಮೃತಪಟ್ಟ ದುರ್ದೈವಿ.
ಕದ್ರಪ್ಪ ಅವರು ಪತ್ನಿ ಲಕ್ಷ್ಮಿ ಅವರನ್ನು ಸ್ಕೂಟಿಯಲ್ಲಿ ಕರೆದುಕೊಂಡು ನಿನ್ನೆ ಸಂಜೆ ರತ್ನಗಿರಿ ರಸ್ತೆ ಮೂಲಕ ಕೆಎಂರಸ್ತೆ ಮಾರ್ಗವಾಗಿ ಹೋಗುತ್ತಿದ್ದಾಗ ನಗರದ ಸೂಪರ್ ಸರ್ವೀಸ್ ಸ್ಟೇಷನ್ ಪೆಟ್ರೋಲ್ ಬಂಕ್ ಎದುರಿಗೆ ಅತಿವೇಗವಾಗಿ ಮುನ್ನುಗ್ಗಿದ ಟಿಪ್ಪರ್ ವಾಹನ ದಂಪತಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮವಾಗಿ ಲಕ್ಷ್ಮಿ ಅವರು ಕೆಳಗೆ ಬಿದ್ದಾಗ ಅವರ ತಲೆ ಮೇಲೆ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕದ್ರಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಸ್ಥಳಖ್ಕೆ ನೂರಾರು ಮಂದಿ ಜಮಾಯಿಸಿ ನಗರದಲ್ಲಿ ಬೇಕಾಬಿಟ್ಟಿ ಸಂಚರಿಸುತ್ತಿರುವ ಟಿಪ್ಪರ್ ವಾಹನಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಈ ಮಾರ್ಗದಲ್ಲಿ ಟಿಪ್ಪರ್ ಲಾರಿಗಳ ಮೂಲಕ ಅಕ್ರಮ ಸಾಗಾಣೆ ಮಾಡುತ್ತಿದ್ದರೂ ಪೆÇಲೀಸರು ಕ್ರಮ ಕೈಗೊಂಡಿಲ್ಲ. ಅತಿವೇಗವಗಿ ಲಾರಿಗಳು ಸಂಚರಿಸುವುದರಿಂದ ಹಲವರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಪೆÇಲೀಸರು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಪಟ್ಟುಹಿಡಿದರು.

ಸುದ್ದಿ ತಿಳಿದ ಸಂಚಾರಿ ಠಾಣೆ ಪೆÇಲೀಸರು ಸ್ಥಳಕ್ಕೆ ದೌಡಾಯಿಸಿ ಸಾರ್ವಜನಿಕರನ್ನು ಸಮಾಧಾನಪಡಿಸಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ, ಟಿಪ್ಪರ್ ಚಾಲಕನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ