ಇಂದು ಫಿಂಚ್ ಪಡೆಯನ್ನ ಪಂಕ್ಚರ್ ಮಾಡಲಿದೆ ಟೀಂ ಇಂಡಿಯಾ : ತವರಲ್ಲಿ ಟೀಂ ಇಂಡಿಯಾನೇ ಕಿಂಗ್

ಟೀಂ ಇಂಡಿಯಾ ಕಳದೆ ಎರಡು ಪಂದ್ಯಗಳನ್ನ ಕೈಚೆಲ್ಲಿರಬಹುದು ಆದರೆ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಟೀಂ ಇಂಡಿಯಾನೇ ಗೆಲ್ಲೋದು. ಅಂದ ಹಾಗೆ ಇದನ್ನ ನಾವ್ ಹೇಳ್ತಿಲ್ಲ. ಸದ್ಯದ ಪರಿಸ್ಥಿತಿ ಮತ್ತು ಹಿಂದಿನ ಅಂಕಿ ಅಂಶಗಳು ಟೀಂ ಇಂಡಿಯಾನೆ ಗೆಲ್ಲೋದು ಅಂತ ಹೇಳ್ತಿದೆ. ಹಾಗಾದ್ರೆ ಕೊಹ್ಲಿ ಪಡೆ ಇಂದು ಗೆಲ್ಲೋದಕ್ಕೆ ಇರುವ ಕಾರಣ ಏನು ಅನ್ನೋದನ್ನ ನಾವ್ ತೋರಿಸ್ತಿವಿ ನೋಡಿ..,

ಫಾರ್ಮ್ಗೆ ಮರಳಿದ್ದಾರೆ ಡ್ಯಾಶಿಂಗ್ ಓಪನರ್ಸ್ ರೋಹಿತ್ -ಧವನ್
ಇಂದು ಆ್ಯರಾನ್ ಪಿಂಚ್ ಪಡೆಯನ್ನ ಟೀಂ ಇಂಡಿಯಾ ಪಂಕ್ಚರ್ ಮಾಡಲಿದೆ. ಯಾಕಂದ್ರೆ ತಂಡದ ಡ್ಯಾಶಿಂಗ್ ಓಪನರ್ಸ್ಗಳಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮತ್ತೆ ಫಾರ್ಮ್ಗೆ ಮರಳಿದ್ದಾರೆ. ಇದಕ್ಕೆ ಮೊನ್ನೆ ಮೊಹಾಳಿ ಅಂಗಳದಲ್ಲಿ ನಡೆದ ಪಂದ್ಯವೇ ಸಾಕ್ಷಿ . ಆಸಿಸ್ ಬೌಲರ್ಸ್ಗಳನ್ನ ಮನಬಂದಂತೆ ಚೆಂಡಾಡಿದ ಈ ಜೋಡಿ ಬರೀ ಟ್ರೇಲರ್ ತೋರಿಸಿತ್ತು. ಇಂದು ಫಿರೋಜ್ ಶಾ ಕೋಟ್ಲ ಅಂಗಳದಲ್ಲಿ ರಿಯಲ್ ಪಿಕ್ಚರ್ನ್ನ ತೋರಿಸಲಿದೆ. ಮೊನ್ನೆ ಮೊಹಾಲಿ ಏಕದಿನ ಪಂದ್ಯದಲ್ಲಿ ಧವನ್ ಶತಕ ಬಾರಿಸಿದ್ರೆ ರೋಹಿತ್ 95 ರನ್ ಗಳಿಸಿದ್ರು. ಇಂದಿನ ಪಂದ್ಯದಲ್ಲೂ ಈ ಜೋಡಿ ಸಿಡಿದೆದ್ರೆ ಟೀಂ ಇಂಡಿಯಾ ಬಿಗ್ ಸ್ಕೋರ್ ಕಲೆ ಹಾಕೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಭರ್ಜರಿ ಫಾರ್ಮ್ನಲ್ಲಿದ್ದಾರೆ ಕ್ಯಾಪ್ಟನ್ ಕೊಹ್ಲಿ
ಟೀಂ ಇಂಡಿಯಾ ಇಂದು ಗೆದ್ದೆ ಗೆಲ್ಲುತ್ತೆ ಅನ್ನೋದಕ್ಕೆ ಬಲವಾದ ಕಾರಣವೊಂದಿದೆ . ಅದು ಕ್ಯಾಪ್ಟನ್ ಕೊಹ್ಲಿ ಫಾರ್ಮ್. ಈಗಾಗಲೇ ಸರಣಿಯಲ್ಲಿ ಎರಡು ಶತಕ ಬಾರಿಸಿ ವೀರಾವೇಶದ ಬ್ಯಾಟಿಂಗ್ ಮಾಡಿರುವ ಕೊಹ್ಲಿ ಇಂದಿನ ಪಂದ್ಯದಲ್ಲೂ ರನ್ ಮಳೆಯನ್ನ ಸುರಿಸಲಿದ್ದಾರೆ. ಇದಲ್ಲದೇ ಕೊಹ್ಲಿಗೆ ತವರಿನಲ್ಲಿ ಆಡುತ್ತಿರೋದು ಪ್ಲಸ್ ಪಾಯಿಂಟ್ ಆಗಲಿದೆ. ಕೊಹ್ಲಿ ವಿರಾಟ ರೂಪ ತೋರಿಸಿದ್ರೆ ಆಸಿಸ್ ಖೇಲ್ ಖತಂ ಆಗಲಿದೆ.

ಕೋಟ್ಲಾದಲ್ಲಿ ಶೈನ್ ಆಗಲಿದ್ದಾರೆ ರಿಸ್ಟ್ ಸ್ಪಿನ್ನರ್ಸ್
ಕೋಟ್ಲಾ ಅಂಗಳ ಇದುವರೆಗೂ ಸ್ಪಿನ್ನರ್ಸ್ಗಳಿಗೆ ನೆರವು ನೀಡುತ್ತಾ ಬಂದಿದೆ. ಸ್ಲೋ ಟ್ರ್ಯಾಕ್ನಿಂದ ಕೂಡಿರುವ ಪಂದ್ಯದಲ್ಲಿ ಒಬ್ಬ ಸಕ್ಸಸ್ ಫುಲ್ ಸ್ಪಿನ್ನ ಬೌಲರ್ ವಿಕೆಟ್ಗಳ ಗೊಂಚನ್ನೆ ಪಡೆಯಬಹುದಾಗಿದೆ. ಈ ಅಂಗಳದಲ್ಲಿ ಟೀಂ ಇಂಡಿಯಾ 20 ಏಕದಿನ ಪಂದ್ಯಗಳ ಪೈಕಿ 12 ಏಕದಿನ ಪಂದ್ಯಗಳನ್ನ ಸ್ಪಿನ್ನರ್ಗಳ ನೆರವಿನಿಂದ ಗೆದ್ದುಕೊಂಡಿದೆ. ಇದಲ್ಲದೇ ಇತ್ತಿಚೆಗೆ ಆಡಿರುವ 5 ಪಂದ್ಯಗಳನ್ನ ನಾಲ್ಕು ಪಂದ್ಯಗಳನ್ನ ಗೆದ್ದು ಫಿರೋಜ್ ಶಾ ಅಂಗಳದಲ್ಲಿ ಸುಲ್ತಾನ್ ಆಗಿ ಮೆರೆದಾಡಿದೆ.

ಡಿಸೈಡರ್ ಪಂದ್ಯದಲ್ಲಿ ಸೋಲಿಲ್ಲದ ಸರದಾರ ಟೀಂ ಇಂಡಿಯಾ
ಆಸಿಸ್ ವಿರುದ್ಧ ಟೀಂ ಇಂಡಿಯಾನೇ ಗೆಲ್ಲುವ ಫೇವರಿಟ್, ಯಾಕಂದ್ರೆ ಈ ಹಿಂದಿನ ಡಿಸೈಡರ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲನ್ನ ಕಂಡಿಲ್ಲ ಸೋಲಿಲ್ಲದ ಸರದಾರನಂತೆ ಗೆದ್ದು ಬೀಗಿದೆ. ಇದಕ್ಕೆ ಇತ್ತಿಚೆಗೆ ತವರನಲ್ಲಿ ವೆಸ್ಟ್ ಇಂಡೀಸ್ ಸರಣಿಯೇ ಸಾಕ್ಷಿ. ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದವು, ಡಿಸೈಡರ್ ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್ ಗಳ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿತ್ತು. ಇದಕ್ಕೂ ಮುನ್ನ ಎರಡು ವರ್ಷಗಳ ಹಿಂದೆ ಶ್ರೀಲಂಕಾ, ನ್ಯೂಜಿಲೆಂಡ್ ವಿರುದ್ಧ ಡಿಸೈಡರ್ ಪಂದ್ಯದಲ್ಲಿ ಸರಣಿ ಗೆದ್ದು ಬೀಗಿತ್ತು.

ತವರಲ್ಲಿ ಟೀಂ ಇಂಡಿಯಾನೇ ಕಿಂಗ್
ಹೌದು ತವರಲ್ಲಿ ಟೀಂ ಇಂಡಿಯಾನೇ ಯಾವಗ್ಲೂ ಕಿಂಗ್ ಆಗಿ ಮೆರೆದಾಡಿದೆ. ಇದಕ್ಕೆ ಈ ಹಿಂದಿನ ಸರಣಿಗಳೇ ಸಾಕ್ಷಿ . ಇತ್ತಿಚೆಗೆ ಟೀಂ ಇಂಡಿಯಾ ತವರಿನಲ್ಲಿ ಆಡಿರುವ 20 ಉಭಯ ಸರಣಿಗಳ ಪೈಕಿ ಟೀಂ ಇಂಡಿಯಾ 17ರಲ್ಲಿ ಸರಣಿ ಗೆದ್ದಿದೆ. ಕಳೆದ 10 ವರ್ಷದಲ್ಲಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡದಗಳ ವಿರುದ್ಧ ಸೋತಿದ್ದು ಬಿಟ್ಟರೇ ಇನ್ನೆಲ್ಲ ಸರಣಿ ಗಳನ್ನ ಗೆದ್ದು ಕೊಂಡಿದೆ.

ಒಟ್ಟಾರೆ ಈ ಎಲ್ಲ ಕಾರಣಗಳಿಂದ ಆ್ಯರಾನ್ ಫಿಂಚ್ ಪಡೆಯನ್ನ ಪಂಕ್ಚರ್ ಮಾಡಿ ಸರಣಿಯನ್ನ ಟೀಂ ಇಂಡಿಯಾ ಗೆದ್ದು ಬೀಗಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ